ರೈತಪರ ಸಮಸ್ಯೆ ಚರ್ಚಿಸಲು ಆಗ್ರಹ

ಕಲಬುರಗಿ ಡಿ5: ಕೃಷಿ ಉತ್ಪನ್ನಗಳಿಗೆ ಯೋಗ್ಯಬೆಲೆ ನೀಡುವದು ಸೇರಿದಂತೆ ವಿವಿಧ ರೈತಪರ ಸಮಸ್ಯೆಗಳ ಕುರಿತಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ, ಸ್ಪಂದಿಸುವ ಮೂಲಕ ರೈತರ ಕುಟುಂಬಗಳನ್ನು ರಕ್ಷಿಸುವಂತೆ ಭಾರತೀಯ ಕಿಸಾನ ಸಂಘ ಮನವಿ ಮಾಡಿದೆ.
ಈ ಕುರಿತು ನಾಳೆ ( ಡಿ6) ಬೆಳಿಗ್ಗೆ 11 ಗಂಟೆಗೆ ಕನ್ನಡಭವನದಿಂದ ಸರದಾರ ವಲ್ಲಭಭಾಯಿ ಪಟೇಲವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವದು .ಸುಮಾರು 500 ರೈತರು ಭಾಗವಹಿಸುವರು ಎಂದು ಸಂಘದ ಸಂಚಾಲಕ ಚನ್ನಬಸಪ್ಪ ಸಲಗರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತೊಗರಿ ಖರೀದಿ ಕೇಂದಗಳನ್ನ್ರು ತಕ್ಷಣ ಆರಂಭಿಸಬೇಕು. ಸಕ್ಕರೆ ಕಾರ್ಖಾನೆಗಳಿಂದ ಬಾಕಿಹಣ ಬಡ್ಡಿ ಸಹಿತ ಪಾವತಿಸಲು ಆದೇಶಿಸಬೇಕು. ಅಳಂದ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು.ಸಾಲಾಮನ್ನಾಹಣ ತಕ್ಷಣ ಬಿಡುಗಡೆ ಮಾಡಿ ಋಣಮುಕ್ತ ಪತ್ರ ನೀಡಬೇಕು.ರೈತರ ಆತ್ಮಹತ್ಯೆ ನಡೆಯಲು ವಿಶೇಷ ಯೋಜನೆ ಪ್ರಕಟಿಸಬೇಕು.ಗಂಡೋರಿ ನಾಲಾ ಎಡಭಾಗದ ಕಾಲುವೆ ನೀರು ನಾಗೂರ ಗ್ರಾಮದವರೆಗೆ ಮಾತ್ರ ತಲುಪುತ್ತಿದ್ದು, ಈ ನೀರು ರಟಕಲ್, ಕಂದಗೂಳ ರೇವಗ್ಗಿ ಮುಂತಾದ ಗ್ರಾಮಗಳಿಗೆ ತಲುಪುವಂತಾಗಬೇಕು. ಜೆಸ್ಕಾಂನಿಂದ ರೈತರಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುವಂತೆ ಕ್ರಮ ಕೈಗೊಳ್ಳಬೇಕು ಎಂಬ ಮನವಿ ಸಲ್ಲಿಸಲಾಗುವದು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಪ್ಪಾರಾವ ಸಾಹು ಹಂಗರಗಿ, ವಿರೂಪಾಕ್ಷಿ ಸುಪ್ಪಣ್ಣ,ಬಸವರಾಜ ಸಜ್ಜನ, ಶಾಂತಪ್ಪ ಪಾಟೀಲ,ಗುಂಡಪ್ಪ ಕುದ್ಮೂಡ ಸೇರಿದಂತೆ ಹಲವರಿದ್ದರು

Leave a Comment