ರೈಟ್‍ಕೇರ್ ಟ್ರಸ್ಟ್‍ನಿಂದ  ವಿದ್ಯಾರ್ಥಿವೇತನ

ಕಲಬುರಗಿ ಫೆ 16: ಬೆಂಗಳೂರು ಮೂಲದ ರೈಟ್‍ಕೇರ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಕಾಲೇಜು ಪ್ರಾಂಶುಪಾಲರ ಸಮಿತಿವತಿಯಿಂದ ರಾಜ್ಯದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮುಗಿಸಿ ಮುಂದಿನ ಶಿಕ್ಷಣ ಕೈಗೊಳ್ಳುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ.

ಕರ್ನಾಟಕದ ಆಯ್ದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸುಮಾರು 20 ಸಾವಿರ ವಿದ್ಯಾರ್ಥಿಗಳಿಗೆ ವಾರ್ಷಿಕ ಒಟ್ಟು ಪ್ರವೇಶ ಶುಲ್ಕದಲ್ಲಿ ಶೇ 50 ರಿಂದ, ಶೇ 80 ರಷ್ಟು ವಿನಾಯತಿಯ ಮೂಲಕ ವಿದ್ಯಾರ್ಥಿವೇತನವಾಗಿ ನೀಡಲಾಗುತ್ತಿದೆ ಎಂದು ರೈಟ್‍ಕೇರ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕಿರಣ್ ಕುಮಾರ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೇ 22 ರಿಂದ 24 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂಟರ್ ನ್ಯಾಶನಲ್ ಎಜುಕೇಶನ್ ಎಕ್ಸಪೋ ನಡೆಸಲಾಗುವದು. ಮಾಹಿತಿಗೆ ( 8549999539) ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು.

Leave a Comment