ರೇಷ್ಮೆಹುಳು ಸಾಕಾಣಿಕೆ ಮನೆಗೆ ಬೆಂಕಿ

 

ಕಲಬುರಗಿ,ಮೇ.16-ಜಿಲ್ಲೆಯ ಕಾಳಗಿ ತಾಲ್ಲೂಕಿನ ಕಂದಗೋಳ ಗ್ರಾಮದಲ್ಲಿ ರೇಷ್ಮೆಹುಳು ಸಾಕಾಣಿಕೆ ಮನೆಗೆ ಬೆಂಕಿ ಬಿದ್ದು, ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.

ಚಂದ್ರಕಾಂತ ನಾಗಣ್ಣ ವಜ್ಜರಗಾಂವ ಎಂಬುವವರಿಗೆ ಸೇರಿದ ರೇಷ್ಮೆಹುಳು ಸಾಕಾಣಿಗೆ ಮನೆಗೆ ಬೆಂಕಿ ತುಗುಲಿದ್ದು, ಮನೆಯೊಳಗಿದ್ದ ರೇಷ್ಮೆಹುಳು ಗೂಡು ಸೇರಿದಂತೆ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿವೆ. 15 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment