ರೇಖಾ ಪತಿ ಆತ್ಮಹತ್ಯೆ ಇನ್ನೂ ನಿಗೂಢ

ಹಿಂದಿ ಚಿತ್ರರಂಗದ ಖ್ಯಾತ ನಟಿ ರೇಖಾ ’ಅತ್ಯುತ್ತಮ ನಟಿ’ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಏಕೆ, ಅತ್ಯಂತ ’ಮೋಹಕ ನಟಿ’ಯೂ ಹೌದು. ಈಗಲೂ ಅಭಿಮಾನಿಗಳ ಮನದಾಳದಲ್ಲಿ ನೆಲೆಯೂರಿರುವ ’ಅಭಿನೇತ್ರಿ. ಈಗಲೂ ಹುಡುಗರಿಂದ ಹಿಡಿದು ಮುದುಕರವರೆಗೆ ರೇಖಾಳನ್ನು ಪ್ರೀತಿಸುತ್ತಾರೆ. ಅದೇಕೋ ನಟಿಗೆ ಮಾತ್ರ ಬಯಸಿದ ಪ್ರೀತಿ ಸಿಗಲೇ ಇಲ್ಲ.

rekha6clrಬಿಗ್ ಬಿ ಎಂದೇ ಖ್ಯಾತಿಯಾಗಿರುವ ಅಮಿತಾಬ್ ಬಚ್ಚನ್ ಪ್ರೀತಿಯೂ ಸಿಗದೆ ಹೋದದ್ದು ವಿಪರ್ಯಾಸದ ಸಂಗತಿ. ಪತಿ ಮುಖೇಶ್ ಅಗರ್‌ವಾಲ್ ರೇಖಾಳೊಂದಿಗೆ ಸಹಬಾಳ್ವೆ ಮಾಡುವ ಅದೃಷ್ಟವೂ ಸಿಗಲಿಲ್ಲ. ’ಗಂಗಾಕಿ ಸೌಗಂಧ್ ಚಿತ್ರದ ಮೂಲಕ ರೇಖಾ ಹಾಗೂ ಅಮಿತಾಬ್ ಬಚ್ಚನ್ ಬಹಳ ಸಮೀಪವಾಗಿದ್ದರು. ಬೆಳ್ಳಿತೆರೆಯ ಮೇಲೆ ವೀಕ್ಷಿಸಿದ ಅಭಿಮಾನಿಗಳು ಖುಷಿಯಾಗಿದ್ದರು. ಈ ಇಬ್ಬರೂ   ನಟಿಸಿದ ಚಿತ್ರಗಳು ಭಾರೀ ಮೆಚ್ಚುಗೆಗೆ ಪಾತ್ರವಾದವು. ಚಿತ್ರದಲ್ಲಿ ಒಂದಾಗಿದ್ದ ಈ ಜೋಡಿ ನಿಜ ಜೀವನದಲ್ಲೂ ಹತ್ತಿರವಾಗಿದ್ದರು.

ಇವರಿಬ್ಬರ ನಡುವಿನ ಪ್ರೀತಿಯೂ ಆಗಿನ ಕಾಲದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಈ ವಿಷಯ ಅಮಿತಾಬ್ ಪತ್ನಿ ಜಯಬಾಧುರಿಗೂ ತಿಳಿದು ಗರಂ ಆದ ಪ್ರಸಂಗವೂ ನಡೆಯಿತು. ಕ್ರಮೇಣ ಬಚ್ಚನ್ ರೇಖಾಳಿಂದ ದೂರವಾದರು.

ಆಗ ರೇಖಾಗೆ ಸಿಕ್ಕಿದ್ದು ಮುಖೇಶ್ ಅಗರ್‌ವಾಲ್. ಇವರಿಬ್ಬರು ಒಟ್ಟಾಗಿರುವ ಚಿತ್ರ ನೋಡಿ ರೇಖಾ ಕಳೆದುಕೊಂಡ ಪ್ರೀತಿ ಮತ್ತೆ ಸಿಕ್ಕಿತು ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದು ಉಂಟು. ನಿರೀಕ್ಷೆಯಂತೆ ೧೯೯೦ ರಲ್ಲಿ ಮುಖೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಈ ಪ್ರೀತಿ ರೇಖಾಳಿಗೆ ಹೆಚ್ಚುದಿನ ಸಿಗಲೇ ಇಲ್ಲ. ೧೯೯೧ ರಲ್ಲಿ ಮುಖೇಶ್ ಆತ್ಮಹತ್ಯೆಗೆ ಶರಣಾದರು.

ಆ ಸಮಯದಲ್ಲಿ ರೇಖಾ ಅವರ ದುಪ್ಪಟ್ಟಾದಿಂದಲೇ ಮುಖೇಶ್ ನೇಣಿಗೆ ಶರಣಾಗಿದ್ದಾರೆಂಬ ಊಹಾಪೋಹ ಹರಡಿತ್ತು. ರೇಖಾ ಅವರು ಮುಖೇಶ್ ಅವರನ್ನು ಮೆಚ್ಚಿ ವಿವಾಹವಾಗಿದ್ದರು ಎಂಬ ಮಾತುಗಳೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಮುಖೇಶ್ ಅನಾರೋಗ್ಯಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ ಕಾರಣ ಮಾತ್ರ ಇದುವರೆಗೂ ತಿಳಿದಿಲ್ಲ. ಇಬ್ಬರ ಪ್ರೀತಿಯಿಂದ ವಂಚಿತರಾಗಿ ಪತಿಯನ್ನು ಕಳೆದುಕೊಂಡಿದ್ದರೂ ರೇಖಾ ಈಗಲೂ ಹಣೆಯಲ್ಲಿ ಸಿಂಧೂರವಿಡುತ್ತಾರೆ. ಅಮಿತಾಬ್ ಹೆಸರಿನಲ್ಲಿ ಈ ಸಿಂಧೂರ ಇಡುತ್ತಿದ್ದಾರೆಂಬ ಮಾತುಗಳೂ ಕೇಳಿಬರುತ್ತವೆ. ಆದರೆ ರೇಖಾ ಅವರ ಪತಿ ಮುಖೇಶ್ ಅವರ ಆತ್ಮಹತ್ಯೆ ಈಗಲೂ ನಿಗೂಢವಾಗಿದೆ.

Leave a Comment