ರೆಡ್ಡಿ ಪ್ರಕರಣ : ಸರ್ಕಾರದ ಹಸ್ತಕ್ಷೇಪ ಪ್ರಶ್ನೆಯೇ ಇಲ್ಲ-ಖರ್ಗೆ

ಕಲಬುರಗಿ ನ 7: ಜನಾರ್ಧನ ರೆಡ್ಡಿ ಡೀಲ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲವೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂಬಿಡೆಂಟ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡಸಲಾಗುತ್ತಿದೆ.ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ.ಸ್ವತಃ ಸಿಸಿಬಿ ಆಯುಕ್ತರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದರು. ಹೀಗಿದ್ದ ಮೇಲೂ ದಾಳಿ ಮತ್ತು ತನಿಖೆಯನ್ನು ರಾಜಕೀಯಪ್ರೇರಿತ ಎನ್ನಲಾಗುತ್ತಿದೆ.ಹಾಗೊಂದು ವೇಳೆ ರಾಜಕೀಯ ಪ್ರೇರಿತ ಎನಿಸಿದರೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೇ ಆಗಿರುವ ಯಡಿಯೂರಪ್ಪ ಅವರು ಪ್ರಶ್ನಿಸಲಿ.

ಸಿಸಿಬಿ ತನ್ನ ಕೆಲಸ ಮಾಡುತ್ತಿದ್ದು,ಅದನ್ನು ರಾಜಕೀಯ ಪ್ರೇರಿತ ಎನ್ನಲಾಗುವದಿಲ್ಲ ಎಂದರು…

Leave a Comment