ರಿಷಿ ಕಪೂರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

 

ನವದೆಹಲಿ, ಏ ೩೦- ಬಾಲಿವುಡ್ ನಟ ರಿಷಿ ಕಪೂರ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಿಷಿ ಅದ್ಭುತ ಪ್ರತಿಭೆ ಹೊಂದಿದ್ದ ದೈತ್ಯ ಎಂದು ಗುಣಗಾನ ಮಾಡಿದ್ದಾರೆ.
ಬಹುಮುಖ ಪ್ರತಿಭಾವಂತ ರಿಷಿ ಕಪೂರ್ ಅವರೊಂದಿಗೆ ತಾವು ನಡೆಸಿದ್ದ ಮಾತುಕತೆಗಳನ್ನು ಪ್ರಧಾನಿ ಸ್ಮರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಾವಿಬ್ಬರು ಪರಸ್ಪರ ಸಂಪರ್ಕಹೊಂದಿದ್ದೆವು. ಸಿನಿಮಾ ಎಂದರೆ ಪ್ರಾಣ ಎಂದು ಹೇಳುತ್ತಿದ್ದ ರಿಷಿ.. ಈ ದೇಶದ ಅಭ್ಯದಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಪ್ರಧಾನಿ ತಮ್ಮಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಕೂಡಾ ರಿಷಿ ಕಪೂರ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ ಸಿನಿಮಾಗಳಲ್ಲಿ ಅತ್ಯದ್ಬುತ ಪಾತ್ರಗಳಲ್ಲಿ ಅಭಿನಯಿಸಿ.. ರೋಮಾಂಟಿಕ್ ನಾಯಕ ನಟ ಎಂದು ಜನಪ್ರಿಯರಾಗಿದ್ದ ರಿಷಿಕಪೂರ್ ನಿಧನದಿಂದ ಈ ದೇಶ ಮುದ್ದಿನ ಮಗನೊಬ್ಬನ್ನು, ಭಾರತೀಯ ಚಲನಚಿತ್ರರಂಗ ಅಮೂಲ್ಯ ಆಭರಣವನ್ನು ಕಳೆದುಕೊಂಡಿದೆ ಎಂದು ಟ್ವೀಟ್ ನಲ್ಲಿ ಸಂತಾಪ ಸೂಚಿಸಿದ್ದಾರೆ

Leave a Comment