ರಿಷಿ ಕಪೂರ್ ಅವರನ್ನು ಪ್ರತಿ ದಿನವೂ ನೆನಪಿಸಿಕೊಳ್ಳುತ್ತೇವೆ: ರಣಧೀರ್

ಮುಂಬೈ, ಮೇ 21 -ಬಾಲಿವುಡ್ ನಟ ಮತ್ತು ಚಲನಚಿತ್ರ ನಿರ್ಮಾಪಕ ರಣಧೀರ್ ಕಪೂರ್ ತಮ್ಮ ಕುಟುಂಬವು ಪ್ರತಿದಿನ ರಿಷಿ ಕಪೂರ್ ಅವರನ್ನು ನೆನಪಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ರಿಷಿ ಕಪೂರ್ ಸಾವನ್ನಪ್ಪಿ ಹಲವು ದಿನಗಳು ಕಳೆದಿವೆ, ಆದರೆ ಅವರ ಕುಟುಂಬವು ಅವರನ್ನು ಪ್ರತಿದಿನವೂ ನೆನಪಿಸಿಕೊಳ್ಳುತ್ತದೆ. ರಿಷಿ ಏಪ್ರಿಲ್ 30 ರಂದು ನಿಧನರಾದರು.

ರಣಧೀರ್ ಕಪೂರ್ ಈ ಬಗ್ಗೆ ಮಾತನಾಡಿ, “ರಿಷಿ ಕಪೂರ್ ಅವರ ಸಾವಿನಿಂದ ಕುಟುಂಬವು ಚೇತರಿಸಿಕೊಳ್ಳುತ್ತಿದೆ. ಈ ದುಃಖವನ್ನು ಎದುರಿಸಲು ದೇವರು ನಮಗೆ ಶಕ್ತಿಯನ್ನು ನೀಡುತ್ತಿದ್ದಾನೆ. ನಾವು ಅವರನ್ನು ಪ್ರತಿದಿನ ನೆನಪಿಸಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಸ್ನೇಹಿತರ ವಿಷಯದಲ್ಲಿ, ಆಹಾರದ ವಿಷಯದಲ್ಲಿ, ಚಲನಚಿತ್ರಗಳ ವಿಷಯದಲ್ಲಿ, ಕುಟುಂಬದ ವಿಷಯದಲ್ಲಿ ನಮ್ಮೆಲ್ಲರ ಅಭಿಪ್ರಾಯ ಒಂದೇ ಆಗಿತ್ತು” ಎಂದಿದ್ದಾರೆ.

“ದೇಶ ವಿದೇಶದಿಂದ ಜನರು ನಮಗೆ ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ನಮಗೆ ಸಂದೇಶಗಳ ಪ್ರವಾಹವಿತ್ತು. ಕೆಲವರು ತಮ್ಮ ಅನುಭವವನ್ನು ರಿಷಿ ಕಪೂರ್ ಅವರೊಂದಿಗೆ ಹಂಚಿಕೊಂಡರು. ಎಲ್ಲರಿಗೂ ಪ್ರತ್ಯುತ್ತರ ನೀಡಲು ನಮಗೆ ಸಾಧ್ಯವಾಗಲಿಲ್ಲ. ಆದರೆ ನಾನು ಈಗ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ರಿಷಿ ತಮ್ಮ ವಿಭಿನ್ನ ಶೈಲಿ ಹಾಗೂ ನೈಜ ನಟನೆಯಿಂದ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆಯಬಲ್ಲರು” ಎಂದು ತಿಳಿಸಿದ್ದಾರೆ.

Leave a Comment