ರಿಯೊದಿಂದ ವಿನೂತನ ಜಾಗೃತಿ

ಮಹಿಳೆಯರು ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುವುದು ಸಹಜ. ಅದರಲ್ಲೂ ಅತಿಯಾದ ರಕ್ತಸಾವ್ರವೂ ಒಂದು. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರಿಗೆ ಇದೊ ಬಂದಿದೆ ನೊಬೆಲ್ ಹೈಜೀನ್‌ನ ರಿಯೊದಿಂದ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ಅತಿಯಾದ ಸ್ರಾವವಿರುವ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾದ ಮೊದಲ ಸ್ಯಾನಿಟರಿ ಪ್ಯಾಡ್ ರಿಯೊ ತನ್ನ ಸಂವಹನ ಅಭಿಯಾನಕ್ಕೆ ಚಾಲನೆ ನೀಡಿದೆ. ಖ್ಯಾತ ಚಲನಚಿತ್ರ ನಟಿ ಹಾಗೂ ರಂಗಭೂಮಿ ಕಲಾವಿದೆ ರಾಧಿಕಾ ಆಪ್ಟೆ ಕೈ ಜೋಡಿಸಿರುವುದು ವಿಶೇಷ. ಈ ಅಭಿಯಾನದಲ್ಲಿ ಅತಿಯಾದ ರಕ್ತ ಸ್ರಾವ ಕುರಿತು ಅರಿವು ವಿಸ್ತರಿಸುವುದರ ಜತೆಗೆ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳ ಕುರಿತು ಬೆಳಕು ಚೆಲ್ಲಲಿದ್ದಾರೆ.
ರಕ್ತ ಸ್ರಾವದ ನೋವು ಮತ್ತು ಅದರ ಮುಖ್ಯ ಕಾರಣಗಳಾಗಿರುವ ಪಿಸಿಒಡಿ ಮತ್ತು ಮೆನೋಪಾಸ್ ಕುರಿತು ತಿಳುವಳಿಕೆ ನೀಡುವುದೆ ಈ ಅಭಿಯಾನದ ಮುಖ್ಯ ಉದ್ದೇಶ.ಇಂತಹ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಅವರು ಒಂಟಿಯಲ್ಲ ಒಗ್ಗಟ್ಟನ್ನು ಸೃಷ್ಟಿಸಿ ಹಾಗೂ ಅವರನ್ನು ಈ ಸಮಸ್ಯೆ ಬಗ್ಗೆ ಮಾತನಾಡಲು ಉತ್ತೇಜಿಸುತ್ತದೆ. ರಿಯೊ ಈಗಾಗಲೇ ಮೈ ಬ್ಲಡಿ ಸೀಕ್ರೆಟ್ ಡಿಜಿಟಲ್ ಧ್ವನಿ ಮುದ್ರಿಕೆಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಹಸಿ ಹಸಿಯಾದ ಮತ್ತು ವಾಸ್ತವ ವಿಧಾನವನ್ನು ಈ ಅಭಿಯಾನದಲ್ಲಿ ಸೇರಿಸಲಾಗಿದೆ. ಅದೇ ಭಾವವನ್ನು ಟಿವಿ ಜಾಹಿರಾತಿನಲ್ಲೂ ರಾಧಿಕಾ ಅಪ್ಟೆ ಅದನ್ನು ಹೆವಿ ಫ್ಲೊ ಎಂದು ಕರೆದಿರುವುದು ಅಭಿಯಾನದ ಹೈಲೈಟ್ಸ್.
ನೊಬೆಲ್ ಹೈಜೀನ್ ಕಂಪನಿ ೨೦೦೨ ರಲ್ಲಿ ಕಮಲ್ ಕುಮಾರ್ ಜೊಹಾರಿ ಪ್ರಾರಂಭಿಸಿದರು. ದೇಶದ ಗ್ರಾಹಕರಿಗೆ ಹಾಗೂ ಭಾರತೀಯ ದೇಹದ ರಚನೆಗೆ ಅನುಗುಣವಾಗಿ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವ ಇರಾದೆ ಹೊಂದಿದೆ. ಇದು ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಉತ್ಪನ್ನಗಳ ಕಂಪನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಭಾರತೀಯ ಗ್ರಾಹಕರಿಗೆ ಅತ್ಯುತ್ತಮ ನೈರ್ಮಲ್ಯದ ಉತ್ಪನ್ನಗಳನ್ನು ಒದಗಿಸಲು ಮುಂದಾಗಿದೆ. ಎಲ್ಲ ವಯೋಮಾನದ ಜನರಿಗೆ ಸೌಖ್ಯ ಮತ್ತು ವಿಶ್ವಾಸವನ್ನು ಹೆಚ್ಚಿಸುವ ಉತ್ಪನ್ನಗಳನ್ನು ಒದಗಿಸುವ ಮೂಲಕ ಒತ್ತಡ ರಹಿತ ಜೀವನ ನಡೆಸಲು ಅವರಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ.
ಕೆಂಪು, ಬ್ಲೀಡಿಂಗ್ ಬಲೂನ್ ರಕ್ತ ಸ್ರಾವದ ಸಂಕೇತ ಹಾಗೂ ಮಹಿಳೆಯರಿಗೆ ಅವರ ಭಾವನೆಗಳು ಅನುಭವಗಳನ್ನು ತೆರೆದುಕೊಳ್ಳಲು ನೆರವಾಗುವ ಸಂಕೇತ. ಅತಿಯಾದ ಸ್ರಾವ ನೀವು ಮರೆಯುವ ವಿಷಯವಲ್ಲ ಅದಕ್ಕೆ ಗಮನ ಕೊಡಬೇಕು ಎನ್ನುತ್ತಾರೆ ನಟಿ ರಾಧಿಕಾ ಆಪ್ಟೆ.
ನೊಬೆಲ್ ಹೈಜೀನ್ ನ ಉಪಾಧ್ಯಕ್ಷ ಕಾರ್ತಿಕ್ ಜೊಹಾರಿ ಮಾತನಾಡಿ, ನಮ್ಮ ನೇರ ಅಭಿಯಾನದಿಂದ ನಾವು ಮನೆಗಳಲ್ಲಿ ಲಕ್ಷಾಂತರ ಸಂವಾದಗಳನ್ನು ಹುಟ್ಟು ಹಾಕಲಿದ್ದೇವೆ ಮತ್ತು ಇಡೀ ದೇಶಾದ್ಯಂತ ಮಹಿಳೆಯರ ಮೌನ ಸಂಕಟ ಕುರಿತು ಬೆಳಕು ಚೆಲ್ಲಲಿದೆ ಎಂದು ಹೇಳಿದರು.
೩೦ ಸೆಕೆಂಡುಗಳ ಟಿ.ವಿ.ಜಾಹಿರಾತು/ವಿಡಿಯೊ ಹಲವು ಡಿಜಿಟಲ್ ಫ್ಲಾಟ್ ಫಾರಂಗಳು ಮತ್ತು ಟೆಲಿವಿಷನ್ ಚಾನಲ್‌ಗಳಲ್ಲಿ ಸನ್ ಟಿವಿ, ಸ್ಟಾರ್, ಜೀ, ನ್ಯೂಸ್ ೧೮ ಮತ್ತಿತರೆ ಚಾನಲ್ ಗಳಲ್ಲಿ ಪ್ರಸಾರವಾಗಲಿದೆ.

Leave a Comment