ರಿಮೇಕ್ ಓಕೆ ಆದರೆ ಎಲ್ಲಾ ಅಲ್ಲ… ಶಿವಣ್ಣ ಉವಾಚ

 ಚಿಕ್ಕನೆಟಕುಂಟೆ ಜಿ.ರಮೇಶ್

ರಿಮೇಕ್ ಚಿತ್ರಗಳಲ್ಲಿ ನಟಿಸಬಾರದು ಎನ್ನುವ ನಿರ್ಧಾರ ಕೈಗೊಂಡಿದ್ದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಅದಕ್ಕೆ ಕಾರಣ ಮಲೆಯಾಳಂನಲ್ಲಿ ತೆರೆಗೆ ಬಂದು ಯಶಸ್ವಿಯಾಗಿದ್ದ ’ಒಪ್ಪಂ’ ಚಿತ್ರ ಕನ್ನಡದಲ್ಲಿ ರಿಮೇಕ್ ಮಾಡಲು ತಂಡ ಮುಂದಾದಾಗ ಕತೆ ಕೇಳಿ ಒಕೆ ಅಂದಿದ್ದರು.

ರಿಮೇಕ್ ಚಿತ್ರ ಮಾಡದಿರಲು ನಿರ್ಧರಿಸಿದ್ದ ಶಿವಣ್ಣ, ಒಳ್ಳೆಯ ಕತೆಗಾಗಿ ರಿಮೇಕ್ ಒಪ್ಪಿಕೊಂಡಿದ್ದರು. ಉತ್ತಮ ಕತೆ ಬಂದರೆ ರಿಮೇಕ್ ಮಾಡುತ್ತೇನೆ . ಆದರೆ ಎಲ್ಲಾ ಚಿತ್ರಗಳನ್ನಲ್ಲ ಎಂದು ಸ್ಪಷ್ಟಪಡಿಸಿದರು.

ಇದೀಗ ರಿಮೇಕ್ ಮಾಡಲು ಅಡ್ಡಿ ಇಲ್ಲ ಆದರೆ ಒಳ್ಳೆಯ ಚಿತ್ರಗಳ ರಿಮೇಕ್ ಅಷ್ಟೇ ಎಲ್ಲಾ ಚಿತ್ರಗಳೂ ಅಲ್ಲ ಎನ್ನುವುದನ್ನು ಕಡ್ಡಿ ಮುರಿದಂತೆ ಪ್ರತಿಕ್ರಿಯಿಸಿದ್ದಾರೆ ಶಿವಣ್ಣ. ’ಒಪ್ಪಂ’ ರಿಮೇಕ್ ಆಗಿ ಮೂಡಿ ಬಂದಿರುವ ಕವಚದಲ್ಲಿ ಶಿವಣ್ಣ ಕುರುಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಕನ್ನಡಕ ಹಾಕಿಕೊಳ್ಳದೆ ಕುರುಡನ ರೀತಿ ಕಾಣಿಸಿಕೊಂಡಿದ್ದಾರೆ.

ಇದರಿಂದ ಶಿವಣ್ಣ ತೊಂದರೆಯನ್ನೂ ಅನುಭವಿಸಿದ್ದಾರೆ. ಚಿತ್ರಕ್ಕಾಗಿ ಎದುರಾದ ಎಲ್ಲಾ ಸಮಸ್ಯೆಯನ್ನು ಮರೆತಿದ್ದಾರೆ. ’ಕವಚ’ ಚಿತ್ರದಲ್ಲಿ ಅಂಧರಾಗಿ ಕಾಣಿಸಿಕೊಂಡಿದ್ದು ಚಿತ್ರಕ್ಕೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಬ್ಲೈಂಡ್ ಆಗಿ ಸೆಟ್‌ಗೆ ಬಂದು ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಕನ್ನಡಕ ಹಾಕಿಕೊಳ್ಳದೆ ಇಡೀ ಚಿತ್ರದಲ್ಲಿ ಕುರುಡನಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಎರಡು sಟು ಇದೆ. ಕುರುಡನಾಗಿ ನಟಿಸುವಾಗ ಬಹಳಷ್ಟು ಬಾರಿ ತಲೆ ನೋವು ಬಂದಿದೆ. ಕಷ್ಟಪಟ್ಟು ಮಾಡಿದ ಸಿನಿಮಾಗಳಿಗೆ ಪ್ರಶಸ್ತಿ ಮಿಸ್ ಆಗುತ್ತೆ ಎನ್ನುವ ಬೇಜಾರಿದೆ ಏನು ಮಾಡೋದು ಎನ್ನುವ ಅಮಜಾಯಿಷಿ ಅವರದು.

ಸದ್ಯ ’ಕವಚ’ ಚಿತ್ರ ಮುಗಿಸಿರುವ ಶಿವಣ್ಣ,’ರುಸ್ತುಂ’ ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಇದಲ್ಲದೆ ಪಿ.ವಾಸು ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಸರದಿ ಸಾಲಿನಲ್ಲಿವೆ. ’ರಸ್ತುಂ’ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸುತ್ತಿದ್ದಾರೆ. ಇದಲ್ಲದೆ ಹಲವು ದೊಡ್ಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ನನಗೂ ಆಗಾಗ ಕೋಪ ಬರುತ್ತದೆ, ಬಹಳಷ್ಟು ಸಮಯ ಅದನ್ನು ನಿಯಂತ್ರಣ ಮಾಡಿಕೊಳ್ಳಲು ಹೋದರೂ ಆಗುವುದಿಲ್ಲ. ಆಗಾಗ ಗೀತಾ ಹೇಳುತ್ತಿರುತ್ತಾರೆ ಕೋಪ ಕಡಿಮೆ ಮಾಡಿಕೊಳ್ಳಿ ಎಂದು ಏನು ಮಾಡೋದು ಕೆಲವೊಮ್ಮೆ ಚಿತ್ರೀಕರಣದ ಸೆಟ್‌ನಲ್ಲಿ ಕೂಗಾಗಿ ಬಿಡುತ್ತೇನೆ. ಆ ಮೇಲೆ ಈಗೆಲ್ಲಾ ಕೂಗಾಡಬಾರದಿತ್ತು ಅನ್ನಿಸುತ್ತದೆ. ಚಿತ್ರೀಕರಣ ಸೆಟ್‌ನಲ್ಲಿರುವ ಹುಡುಗರಿಗೂ ಗೊತ್ತು ಎಂದು ಹೇಳಿಕೊಂಡರು ಶಿವಣ್ಣ.

ಕವಚ ಚಿತ್ರದ ಚಿತ್ರೀಕರಣದ ಸೆಟ್‌ನಲ್ಲಿ ಮಾತಿಗೆ ಸಿಕ್ಕಿದ್ದ ಶಿವಣ್ಣ, ಪ್ರತಿ ಹೊಸ ವರ್ಷದಲ್ಲಿ ಏನಾದರೂ ಹೊಸದೊಂದು ನಿರ್ಣಯ ಕೈಗೊಳ್ಳುತ್ತೇನೆ, ಅದನ್ನು ಪಾಲಿಸಲು ಪ್ರಯತ್ನ ಪಡುತ್ತೇನೆ. ಆದರೆ ಅದು ಆಗುವುದಿಲ್ಲ. ಹೀಗಾಗಿ ಸಹಜವಾಗಿ ಕೋಪ ಬರುತ್ತದೆ. ಕೋಪ ಕೆಟ್ಟದಕ್ಕಲ್ಲ.ಒಳ್ಳೆಯದಕ್ಕೆ ಎಂದು ಹೇಳಿಕೊಂಡರು..

ಕವಚ ಚಿತ್ರ ಪೂರ್ಣಗೊಂಡಿದೆ. ’ರುಸ್ತುಂ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತೇನೆ, ಈ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸುತ್ತಿದ್ದಾರೆ. ದೊಡ್ಡ ತಾರಾಗಣದ ಚಿತ್ರವಾಗಲಿದೆ. ಈ ಚಿತ್ರದ ಬೆನ್ನಲ್ಲೇ ಪಿ.ವಾಸು ನಿರ್ದೇಶನದ ಚಿತ್ರ ಒಪ್ಪಿಕೊಂಡಿದ್ದೇನೆ.ಅದರಲ್ಲಿ ನಟಿಸುತ್ತಿದ್ದೇನೆ. ಅದರ ಚಿತ್ರೀಕರಣ ಇನ್ನೂ ಆರಂಭವಾಗಬೇಕಾಗಿದೆ.

Leave a Comment