ರಾಹುಲ್ ಟೆಂಪಲ್ ರನ್ ಶಶಿತರೂರ್ ಸಮರ್ಥನೆ

ನವದೆಹಲಿ, ಡಿ. ೩- ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇವಾಲಯಗಳ ಭೇಟಿಯನ್ನು ಕಾಂಗ್ರೆಸ್ ಸಂಸದ ಹಾಗೂ ಚಿಂತಕ ಶಶಿತರೂರ್ ಸಮರ್ಥಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ರಾಹುಲ್ ಗಾಂಧಿ ಅವರ ಉದ್ದೇಶ ಅವಕಾಶವಾದದಲ್ಲಲ, ಬದಲಿಗೆ ಧರ್ಮದ ಬಗ್ಗೆ ಅವರ ಆಂತರ್ಯದಲ್ಲಿರುವ ನಂಬಿಕೆ ಎಂದು ಇಲ್ಲಿ ಟೈಮ್ಸ್‌ನ ಸಾಹಿತ್ಯ ಕೂಟದಲ್ಲಿ ಮಾತನಾಡುತ್ತ ಶಶಿತರೂರ್ ಹೇಳಿದ್ದಾರೆ.

ದೇವರು, ಧರ್ಮ ಕುರಿತಂತೆ ನಮ್ಮ ಖಾಸಗಿ ನಂಬಿಕೆ ವಿಶ್ವಾಸಗಳನ್ನು ಬಹಿರಂಗವಾಗಿ ತೋರ್ಪಡಿಸಿ ಕೊಳ್ಳುವುದು ಕಾಂಗ್ರೆಸ್ ಸಂಸ್ಕೃತಿಗೆ ಒಗ್ಗಿದ್ದಲ್ಲಿ ಅದೇನಿದ್ದರೂ ಬಿಜೆಪಿ ಸಂಘ ಪರಿವಾರದ ಪರಿಪಾಠ ಎಂದಿದ್ದಾರೆ

`ಗಾಢವಾಗಿ ಧಾರ್ಮಿಕತೆ ಬೇರೂರಿರುವ ದೇಶದಲ್ಲಿ ಧಾರ್ಮಿಕತೆ ಮತ್ತು ಧರ್ಮನಿರಪೇಕ್ಷ ವಿಷಯದ ಚರ್ಚೆಗೆ ತೆಗೆದುಕೊಂಡರೆ, ಧರ್ಮ ನಿರಪೇಕ್ಷಿಗಳಿಗೆ ಸೋ–ಲಾಗುತ್ತದೆ ಎಂಬುದು ವಾಸ್ತವ ಸತ್ಯ ಎಂದೂ ತರೂರ್ ಹೇಳಿದ್ದಾರೆ.

 `ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ದೇವಾಲಯ ಸುತ್ತುವುದು, ತಮ್ಮನ್ನೂ `ಶಿವಭಕ್ತ` ಎಂದು ಹೇಳಿಕೊಳ್ಳುವುದು, ಬಿಜೆಪಿಯವರು ಹೇಳುವಂತೆ, ತೋರಿಕೆಗೂ ಅಲ್ಲ, — ಧಾರ್ಮಿಕ ಆಚರಣೆಯು ಅಲ್ಲ, ಬದಲಿಗೆ ಅವರಲ್ಲಿರುವ ಗಾಢವಾದ ಧಾರ್ಮಿಕ ಚಿಂತನೆ ಕಾರಣ ಎಂದಿದ್ದಾರೆ.

ಪ್ರಧಾನ ಮೋದಿ ಅವರ ಆರಂಭಿಕ ದಿನಗಳಲ್ಲಿಯ ಅವರ ಆರ್ಥಿಕ ಮತ್ತತು ಅಭಿವೃದ್ಧಿ ಕುರಿತ ಚಿಂತನೆಗಳ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದದ ತರೂರ್, ಪಾಕಿಸ್ತಾನ ಭಾರತದಿಂದದ ಬೇರೆಯಾಗುವ ಮುನ್ನ ದೇಶದ ಸಮಗ್ರತೆ ಕುರಿತಂತೆ ಆರ್.ಎಸ್.ಎಸ್.ನ ಕೊಡೆಗೆ ಬಗ್ಗಗೆಯೂ ಮೆಚ್ಚುಗೆ ಸೂಚಿಸಿದ್ದಾರೆ.

ಶಬರಿಮಲೈ ದೇವಾಲಯಕ್ಕೆ ಮಹಿಳೆಯರಿಗೂ ಪ್ರವೇಶ ಕಲ್ಪಿಸಿರುವ ಸುಪ್ರೀಂ ಕೋರ್ಟ್ ಆದೇಶ, ಅದರ ಪಾಲನೆಗೆ ಉಂಟಾಗಿರುವ ಅಡ್ಡಿ ಕುರಿತಂತೆ ಸ್ಪಷ್ಟನೆ ನೀಡಿರುವ ತರೂರ್, `ಪುರುಷ` ಹಾಗೂ ಮಹಿಳೆಯರಿಗೆ ಸಮಾನ ಧಾರ್ಮಿಕ ಅವಕಾಶವಿರಬೇಕು` ಎಂಬುದರಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಆದರೆ, ಧಾರ್ಮಿಕ ಭಾವನೆ ಅತಿಸೂಕ್ಷ್ಮ ವಿಚಾರ. ತಮ್ಮ ಪಕ್ಷದ ಕೇರಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಲ್ಲಿಯ ಧಾರ್ಮಿಕ ನಂಬಿಕೆ ಭಾವನೆಗಳೂ ಕಾನೂನು ಪಾಲನೆಯಷ್ಟೇ ಮುಖ್ಯವಾಗುತ್ತದೆ ಎಂದು ಶಶಿತರೂರ್ ಹೇಳಿದ್ದಾರೆ.

Leave a Comment