ರಾಹುಲ್ ಜನಾಶೀರ್ವಾದ ಯಾತ್ರೆಗೆ ತೆರೆ

ಗುಲ್ಬರ್ಗಾ, ಫೆ. ೧೩- ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೊದಲ ಹಂತದ ಜನಾಶೀರ್ವಾದ ಯಾತ್ರೆಗೆ ಇಂದು ತೆರೆ ಬಿದ್ದಿತು. ಕಳೆದ ನಾಲ್ಕು ದಿನಗಳಿಂದ ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆ, ರೋಡ್ ಶೋಗಳನ್ನು ನಡೆಸಿದ್ದ ರಾಹುಲ್, ಜತೆ ಜತೆಗೆ ಈ ಭಾಗದ ಪ್ರಮುಖ ಮಠಗಳು, ದೇವಾಲಯಗಳು, ಮಸೀದಿಗಳಿಗೆ ಸಹ ಭೇಟಿ ನೀಡಿದ್ದರು.

ಯಾತ್ರೆಯ ಕೊನೆಯ ದಿನವಾದ ಇಂದು ಬೀದರ್‌ನಲ್ಲಿ ರೋಡ್ ಶೋ ಸಹ ನಡೆಸಿ, ವಿಶ್ವಗುರು, 12ನೇ ಶತಮಾನದ ಕ್ರಾಂತಿಕಾರಕ ಸಮಾಜ ಸುಧಾರಕ ಬಸವಣ್ಣನವರ ಅನುಭವ ಮಂಟಪಕ್ಕೂ ಅವರು ಭೇಟಿ ನೀಡಿದ್ದರು.

ಇದಾದ ನಂತರ ಅವರು ಬೀದರ್‌‌ನ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್ಸಾದರು.

ಬೆಳಗಾವಿ ವಿಭಾಗದಲ್ಲಿ 2ನೇ ಹಂತ

ರಾಹುಲ್‌ಗಾಂಧಿ ಅವರ ಎರಡನೇ ಹಂತದ ಜನಾಶೀರ್ವಾದ ಯಾತ್ರೆ ಬೆಳಗಾವಿ ವಿಭಾಗದಲ್ಲಿ ಇದೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿದ್ದು, ದಿನಾಂಕ ಇನ್ನೂ ಅಂತಿಮಗೊಂಡಿಲ್ಲ.

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ರಾಹುಲ್ ಗಾಂಧಿ ಫೆ. 23 ರಿಂದ 26 ರವರೆಗೂ ಬೆಳಗಾವಿ ವಿಭಾಗದಲ್ಲಿ 2ನೇ ಹಂತದ ಜನಾಶೀರ್ವಾದ ಯಾತ್ರೆ ನಡೆಸುವರು.

Leave a Comment