ರಾಹುಲ್ ಗಾಂಧಿ ಜನ್ಮದಿನ ಆಚರಣೆ

ಹುಬ್ಬಳ್ಳಿ,ಜೂ 19-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ  ರಾಹುಲ್ ಗಾಂಧಿಜಿ ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಉಣಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು  ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕೇಕ್ ಕಟ್ ಮಾಡಿ, ಬಡ ರೋಗಿಗಳಿಗೆ ಹಣ್ಣು-ಹಂಪಲ ಹಾಗೂ ಬ್ರೇಡ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ನೇತೃತ್ವವನ್ನು ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್‍ಗನಿ ವಲಿಅಹ್ಮದ ವಹಿಸಿದ್ದರು. ಈ ಸಂದರ್ಭದಲ್ಲಿ ಎಐಸಿಸಿ ಸದಸ್ಯರಾದ ಕಿರಣ ಮೂಗಬಸವ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಸುನಿತಾ ಹುರಕಡ್ಲಿ, ಡಿಸಿಸಿ ಮಹಿಳಾ ಅಧ್ಯಕ್ಷರಾದ ತಾರಾದೇವಿ ವಾಲಿ, ಶಾಂತಾ ಇಳಕಲ್, ಪ್ರಕಾಶ ಬುರಬುರೆ, ಡಾ. ಬಿರಾದಾರ, ಡಾ. ಕಳ್ಳಿಮನಿ, ಸರೋಜಾ ಹೂಗಾರ, ವೀರಣ್ಣ ನೀರಲಗಿ, ಜಯಂತ ನೀಲಗುಂದ, ಸಚಿನಬಾಬು ಬಡಗು, ಶರೀಫ ಗರಗದ, ಯುಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ ಶೆಲವಡಿ, ಅಭಿಮನ್ಯು ರೆಡ್ಡಿ, ಗೌಸ್ ಮುಲ್ಲಾ, ಅಜೀಜ್ ಮುಲ್ಲಾ, ಚಿಂತಾಮಣಿ, ಆನಂದ ಮುಗದಮ್, ಬಿಸ್ತು ಬೆಳಗಾಂವಕರ, ಮಹೇಶ ಪಾಟೀಲ, ಫಕ್ಕೀರಪ್ಪ ಕುರುಬರ, ರಾಜೇಶ ಇಂಗಳೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಧುರೀಣರು ಉಪಸ್ಥಿತರಿದ್ದರು.
ಕಾಂಗ್ರೆಸ್ ಧುರೀಣರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್‍ಗನಿ ವಲಿಅಹ್ಮದ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment