ರಾಸಾಯನಿಕ ಸಿಂಪಡಿಸುವ ಕಾರ್ಯಕ್ಕೆ ಚಾಲನೆ

ಮೈಸೂರು, ಏ.3:- ಕೊರೋನಾ ಸೋಂಕು ಮೈಸೂರು ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ರಾಸಾಯನಿಕ ಸಿಂಪಡಿಸಿ, ಸ್ಪ್ರೇ ಮತ್ತು ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಕಾರ್ಯಕ್ರಮಕ್ಕೆ ಇಂದು ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಶ್ರೀರಾಂಪುರ ರಿಂಗ್ ರಸ್ತೆಯ ವೃತ್ತದಲ್ಲಿ ಚಾಲನೆ ನೀಡಿದರು. ಇಂದು ಶ್ರೀರಾಂಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಪರಸಯ್ಯನಹುಂಡಿ, ರಮಾಬಾಯಿನಗರ, ಲಿಂಗಾಬೂದಿಪಾಳ್ಯ, ಮೈಸೂರು ವಿ.ವಿ. ಬಡಾವಣೆಗೆ ಸಿಂಪಡಣೆ ಮಾಡಲಾಗಿದೆ.
ಈ ಸಂದರ್ಭ ಜಿ.ಪಂ. ಸದಸ್ಯರಾದ ಮಾದೇಗೌಡ ಮೂಡಾ ಆಯುಕ್ತ ಕಾಂತರಾಜು, ತಹಶೀಲ್ದಾರ್ ರಕ್ಷಿತ್, ಇ.ಒ. ಕೃಷ್ಣಕುಮಾರ್ ಹಾಜರಿದ್ದರು.
ಶಾಸಕ ಜಿ.ಟಿ.ದೇವೇಗೌಡರ ನಿರ್ದೇಶನದ ಮೇರೆಗೆ ಮೂಡಾ ವತಿಯಿಂದ ಇಂದು ಗೆಜ್ಜಗಳ್ಳಿ, ಬಂಡಿಪಾಳ್ಯ, ಹೊಸಹುಂಡಿ, ಗುಡಮಾದನಹಳ್ಳಿ, ಏಳಿಗೆಹುಂಡಿ, ಕೊಪ್ಪಲೂರು, ಗೊರೂರು, ಮಹದೇವಪುರ, ರಮಾಬಾಯಿನಗರ, ಮುನಿಸ್ವಾಮಿನಗರ, ನರ್ಮ್ ಕಾಲೋನಿ, ಡಾ.ಬಿ.ಆರ್. ಅಂಬೇಡ್ಕರ್ ಕಾಲೋನಿ, ಮತ್ತು ನವೋದಯ ಬಡಾವಣೆಗಳಲ್ಲಿ. ರಾಸಾಯನಿಕ ಸಿಂಪಡಿಸಿ, ಸ್ಪ್ರೇ ಮತ್ತು ಬ್ಲೀಚಿಂಗ್ ಪೌಡರ್ ಅನ್ನು ಮೂಡಾ ಮತ್ತು ಅಗ್ನಿಶಾಮಕ ಇಲಾಖೆ ಜೊತೆಗೂಡಿ ಸಿಂಪಡಿಸಿದರು.

Leave a Comment