ರಾಷ್ಟ್ರೀಯ ಸ್ವಚ್ಛತಾ ದಿನ

 ಆರೋಗ್ಯವಾಗಿರಲು ಸ್ವಚ್ಛ ಪರಿಸರ ಅವಶ್ಯ
ರಾಯಚೂರು.ಜ.30- ಮನುಷ್ಯನು ಒಳ್ಳೆಯ ಆರೋಗ್ಯ ಹೊಂದದೇ ಇದ್ದರೆ ಜೀವನದುದ್ದಕ್ಕೂ ಸಾಧನೆ ಮಾಡಲಾಗುವುದಿಲ್ಲ. ಹಾಗಾಗಿ ಆರೋಗ್ಯವಾಗಿರಲು ಸ್ವಚ್ಛ ಪರಿಸರ ಅವಶ್ಯಕತೆಯಿದೆ ಎಂದು ಪ್ರಧಾನ ಮತ್ತು ಜಿಲ್ಲಾ ನ್ಯಾಯಧೀಶರಾದ ಬೈಲೂರು ಶಂಕರ್ ರಾಮಾ ಹೇಳಿದರು.
ಅವರಿಂದು ಜಿಲ್ಲಾ ನ್ಯಾಯಲಯದ ಸಂಕೀರ್ಣ ಮುಂಭಾಗದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ರಾಯಚೂರು ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನ ಆಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಬದುಕಿನುದ್ದಕ್ಕೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಒದಗಿದೆ. ಸಕಲ ಆರೋಗ್ಯ ಉತ್ತಮ ಆರೋಗ್ಯ ಹೊಂದುವುದು ಮುಖ್ಯವಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು. ಜನರ ಸ್ವಭಾವ ಗಮನಿಸಿದಾಗ ವಸ್ತು ಹಾಗೂ ಕಸಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ನಗರಸಭೆ ನಿಗದಿಪಡಿಸಿದ ಸ್ಥಳದಲ್ಲಿ ಕಸವನ್ನು ಎಸೆದಾಗ ಪೌರ ಕಾರ್ಮಿಕರಿಗೆ ಕಸವನ್ನು ವಿಲೇವಾರಿ ಮಾಡಲು ಅನುಕೂಲವಾಗುತ್ತದೆ.
ಸ್ವಚ್ಛತಾ ವಿಷಯದಲ್ಲಿ ಕಾನೂನು ಕಾಯ್ದೆಗಳಿರುವುದರಿಂದ ಅವುಗಳ ಪಾಲನೆ ಮಾಡುವಲ್ಲಿ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಸುತ್ತಮುತ್ತಲಿನ ಪರಿಸರ ಹಾಳು ಮಾಡಿಕೊಳ್ಳುವುದರಿಂದ ರೋಗ-ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮನೆಯೊಳಗೆ ಸ್ವಚ್ಛತೆ ಇದ್ದಹಾಗೆ ಮನೆಯ ಮುಂದನೆ ಸ್ವಚ್ಛತೆವಿಟ್ಟುಕೊಳ್ಳುವುದು ಮುಖ್ಯವಾಗಿದೆ. ಎಲ್ಲೆಂದರೆಲ್ಲಿ ಕಸ ಎಸೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತದೆ ಎಂದರು.
1 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ಮಹಾದೇವಯ್ಯ ಮಾತನಾಡಿ 365 ದಿನಗಳು ಸಹ ಪ್ರತಿಯೊಬ್ಬ ಮನೆ ಮುಂದೆ ಅಂಗಳವನ್ನು ಸ್ವಚ್ಛವಾಗಿಡಬೇಕು. ಸಾರ್ವಜನಿಕರು ತಮ್ಮ ಮನೆ ಮುಂದೆ ಇರುವ ಕಸವನ್ನು ಕಾರ್ಮಿಕರ ನೆರವನ್ನು ಪಡೆಯದೇ ಸ್ವಯಂ ಮೂಲಕ ನಗರವನ್ನು ಸ್ವಚ್ಛವಾಗಿಸುವ ಕೆಲಸ ಪೌರ ಕಾರ್ಮಿಕರದ್ದಾಗಿರುತ್ತದೆ. ಸ್ವಚ್ಛವಾಗಿಡುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯ . ಅಕ್ಕಪಕ್ಕ ಜನರಿಗೆ ಸ್ವಚ್ಛತಾ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ನಗರಸಭೆಯ ಪೌರ ಕಾರ್ಮಿಕರು ಅವರ ಮೇಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಅಚ್ಚುಕಟ್ಟಾಗಿ ನಗರವನ್ನು ಇಡುವರು. ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಭಾನುರಾಜ, ನಗರಸಭೆ ಪೌರಾಯುಕ್ತ ರಮೇಶ ನಾಯಕ, ನಗರಸಭೆ ಸದಸ್ಯ ಜಯಣ್ಣ, ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಬಿ.ಎಸ್.ಭಾರತಿ, 1 ನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಧೀಶರು ಎಸ್.ಆರ್.ಪರದೇಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಸಿ.ನಾಡಗೌಡ, ನಗರಸಭೆ ಕಾನೂನು ಸಲಹೆಗಾರ ಸಿ.ಎ.ರಬ್, ವಕೀಲರ ಸಂಘದ ಕಾರ್ಯಾದರ್ಶಿ ಶ್ರೀಧರ ಅಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment