ರಾಷ್ಟ್ರೀಯ ಯುವದಿನ, ಯುವಕಾರ್ಯಗಾರ

ವಿವೇಕಾನಂದರು ವಿಶ್ವಕ್ಕೆ ಮಾದರಿ
ರಾಯಚೂರು.ಜ.12- ಸ್ವಾಮಿ ವಿವೇಕಾನಂದರು ಕೇವಲ ನಮ್ಮ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಮಾದರಿಯಾದ ವ್ಯಕ್ತಿಯಾಗಿದರೆಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಟಿ.ಕಲ್ಲಯ್ಯ ಹೇಳಿದರು.
ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ ಮತ್ತು ಭಾರತ ಸೇವಾದಳ ಹಾಗೂ ಎಸ್‌3 ಕ್ಲಬ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ 156 ಜನ್ಮದಿನ ಅಂಗವಾಗಿ ರಾಷ್ಟ್ರೀಯ ಯುವದಿನ ಮತ್ತು ಯುವ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರು ಅಧ್ಯಾತ್ಮಕ ಜೊತೆಗೆ ಯುವಜನತೆಗೆ ಮಾದರಿಯಾಗಿದ್ದರು. ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣ ಐತಿಹಾಸಿಕವಾಗಿದೆ. ಭಾರತವನ್ನು ಪ್ರತಿನಿಧಿಸಿದ್ದವರು ತಮ್ಮ ಉದಾತ್ತ ಮಾತುಗಳಿಂದಲೆ ದೇಶದ ಘನತೆ ಎತ್ತಿ ಹಿಡಿದರು. ವಿವೇಕಾನಂದರ ಜೀನವ, ತತ್ವಗಳನ್ನು ಪ್ರಪಂಚವು ಆಶ್ಚರ್ಯವಾಗಿ ನೋಡಿತು ಎಂದರು.
ವಿವೇಕಾನಂದರ ಕೇವಲ 39 ವರ್ಷ ಬದುಕಿದರು ಕೂಡ ವಿಶ್ವ ಮಾನವ ಎನಿಸಿಕೊಂಡರು. ಇವರ ದಿವ್ಯ ವಾಣಿಗಳು ಯುವ ಜನತೆಯ ಜೀವನದ ಮೇಲೆ ಸ್ಪೂರ್ತಿ ನೀಡುತ್ತಿವೆ. ವಿವೇಕಾನಂದರ ತತ್ವಗಳನ್ನು ಯುವಜನತೆ ಅನುಸರಿಸಿದರೆ, ವ್ಯಕ್ತಿತ್ವವನ್ನು ಅತ್ತುತ್ಯಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಧೃಡ ದೇಶಕಟ್ಟುವಲ್ಲಿ ಯುವಕರ ಪಾತ್ರ ಮಹತ್ವದಾಗಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಮಂಜುನಾಥ ಮಾತನಾಡಿ ರಾಷ್ಟ್ರೀಯ ಯುವದಿನ ಒಂದು ದಿನ ಸೀಮಿತವಾಗದೆ ಇಂದಿನಿಂದ ಏಳು ದಿನವರೆಗೆ ರಾಷ್ಟ್ರಾದ್ಯಂತ ವಿವೇಕಾನಂದರ ತತ್ವಗಳು, ಆದರ್ಶಗಳು, ಯುವಕರಿಗೆ ಸಾರಲಾಗುತ್ತದೆ. ಇಂದಿನ ಯುವಜನತೆಯು ರಾಷ್ಟ್ರದ ಶಕ್ತಿಯಾಗಿದೆಂದರು.
ಮುಂದು ವರೆಯುತ್ತಿರುವ ಭಾರತ ದೇಶವು ವಿವೇಕಾನಂದರ ಆದರ್ಶಗಳನ್ನು ಪಾಲನೆ ಮಾಡಬೇಕಾಗಿದೆ. ಅವರ ಜೀವನ ಚರಿತ್ರೆ, ತತ್ವಗಳನ್ನು ತಿಳಿದುಕೊಳ್ಳುವುದು ಇಂದಿನ ಯುವಕರಿಗೆ ಅವಶ್ಯಕವಾಗಿದೆ. ದೇಶಕ್ಕೆ ಒಳಿತಾಗುವ ಕೆಲಸ ಯುವಜನತೆಯಿಂದ ಆಗಬೇಕಾಗಿದೆ. ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಬದಲಾವಣೆಗೊಳ್ಳುವಲ್ಲಿ ಯುವಕರಿಂದ ಮಾತ್ರ ಸಾಧ್ಯವಾಗುತ್ತದೆಂದರು. ಮತದಾನ ಚುನಾವಣೆ ಕ್ಲಬ್ ನಾಮಫಲಕ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ದಸ್ತಗಿರಿ ಸಾಬ್ ದಿನ್ನಿ, ಉಪನಾಸ್ಯಕರಾದ ಪ್ರಾಣೇಶ, ಶಿವರಾಜ್, ಭಾರತೀಯಸೇವಾದಳ ಕಾರ್ಯದರ್ಶಿ ವಿದ್ಯಾಸಾಗರ, ನೆಹರುಯುವ ಕೇಂದ್ರ ಲೆಕ್ಕಾಧಿಕಾರಿ, ಜಿ.ಎಸ್.ಹೀರೆಮಠ, ನೋಡಲ್ ಅಧಿಕಾರಿ ದಂಡಪ್ಪ ಬಿರಾದರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment