ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಬಾದಾಮಿ,ಸೆ 12ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದಲ್ಲಿರುವ ಅರಣ್ಯ ಪ್ರದೇಶ ಹಾಗೂ ವನ್ಯ ಜೀವಿಗಳ ಸಂರಕ್ಷಣೆಗಾಗಿ ಹಗಲಿರುಳು ದುಡಿಯುತ್ತಾ ಪ್ರಾಣ ತ್ಯಾಗ ಮಾಡಿದವರ ಸ್ಮರಣೆಗಾಗಿ ದೇಶಾಧ್ಯಂತ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾರಚಣೆಯನ್ನು ಸೆ.11 ರಂದು ಬಾದಾಮಿಯ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಿದರು

 
ಭಾರತ ಸರ್ಕಾರದ ಪರಿಸರ, ಅರಣ್ಯ, ಹವಾಮಾನ ಇಲಾಖೆಯ ನಿರ್ಧೇಶನದಂತೆ ಬಾದಾಮಿ ವಲಯದ ಎಲ್ಲ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಆಚರಿಸಿದರು, ಬಾದಾಮಿ ವಲಯದ ಎಲ್ಲ ಅರಣ್ಯ ಇಲಾಖೆಯ ಸಿಬ್ಬಂಧಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಮಾರಕವನ್ನು ಉದ್ಘಾಟಿಸಿದರು
ಇದೇ ಸಂದರ್ಭದಲ್ಲಿ ಬಾಗಲಕೋಟ ಅರಣ್ಯ ವಿಭಾಗದ ಸಿಬ್ಬಂಧಿಗಳು ಬಾದಾಮಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು, ವಿಭಾಗದ ಉಪ ವಲಯ ಅರಣ್ಯಾಧಿಕಾರಿಗಳ ಸಂಘ, ಅರಣ್ಯ ರಕ್ಷಕರ ಹಾಗೂ ವೀಕ್ಷಕರ ಸಂಘಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

 

 
ಈ ಕಾರ್ಯಕ್ರಮದಲ್ಲಿ ಎ.ಎಸ್.ಪಾಕಿ, ಸಿ.ಜಿ.ಮುಜಗೊಂಡ, ಪಿ.ಡಿ.ಹುನ್ನೂರ, ಎಸ್.ವೈ.ಜೋತೆನ್ನವರ, ವಿ.ಟಿ.ನಾಯಕ, ಶ್ರೀಮತಿ.ಎಸ್.ಎಸ್.ಹಿರೇಮಠ, ಎಸ್.ಎಮ್.ಕೆಳದೂರ, ಎಸ್.ಎಮ್.ಮಡಿವಾಳರ, ಪಿ.ಎಚ್.ಬರಮಗೌಡ್ರ, ವಿ.ಜಿ.ಕಿವಡನ್ನವರ, ಎಂ.ಎನ್.ಮುರನಾಳ, ಎಲ್.ಎಮ್.ಗೋಪಾಳಿ, ಎಚ್.ಎಮ್.ಚಿಮ್ಮನಕಟ್ಟಿ, ಆರ್.ಎಂ.ವಡ್ಡರಕಲ್ಲ, ಎ.ಎಸ್.ನಾಯಕ, ಎಸ್.ಎಸ್.ಲೋಣಿಮಠ, ಡಿ.ಎಸ್.ನಾಯ್ಕರ, ಎಸ್,ಐ.ನಿಂಬಾಳ, ಕಮತರ, ದೊಡ್ಡಪತ್ತಾರ, ಮನಗೂಳಿ, ಶಿವಶಿಂಪಿ, ಬಾಲದನ್ನವರ, ಕಳಲಿ, ಹಿರೇತಳವಾರ ಇದ್ದರು

Leave a Comment