ರಾಷ್ಟ್ರವ್ಯಾಪ್ತಿ ಕಾರ್ಮಿಕರ ಮುಷ್ಕರ

ಎರಡು ದಿನಗಳ ಕಾಲ ಅಂಚೆ ಕಚೇರಿಗಳು ಸಂಪೂರ್ಣ ಬಂದ್
ಮೈಸೂರು, ಜ.7 : ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪ್ತಿಗೆ ಬಂದ್ ಗೆ ಮೈಸೂರು ವಿಭಾಗದ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು ಆದ್ದರಿಂದ ಎರಡು ದಿನಗಳ ಕಾಲ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ವಿಭಾಗದ ಕಾರ್ಯದರ್ಶಿ ಸುಂದರಯ್ಯ ತಿಳಿಸಿದರು.
ನಾಳೆ ಮತ್ತು ದಿ.9ರಂದು ನಡೆಯುವ ಪ್ರತಿಭಟನೆಯಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘ, ರಾಷ್ಟ್ರೀಯ ಅಂಚೆ ನೌಕರರ ಸಂಘವು ಬೆಂಬಲಿಸಿದ್ದು, ಈ ನಿಟ್ಟಿನಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಲಷ್ಕರ್ ಮೊಹಲ್ಲಾದಲ್ಲಿರುವ ಪ್ರಧಾನ ಅಂಚೆ ಕಚೇರಿ ಬಳಿ ಪ್ರತಿಭಟನೆ ನಡೆಸಿ ಅಲ್ಲಿಂದ ಪುರಭವನದವರೆಗೂ ಮೆರವಣಿಗೆ ನಡೆಸಲಾಗುವುದು ಎಂದು ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ವಿಭಾಗದಲ್ಲಿ 65 ಅಂಚೆ ಕಚೇರಿಗಳಿದ್ದು ನಗರದಲ್ಲಿಯೇ ಸುಮಾರು 38 ಕಚೇರಿಗಳಿಲ್ಲಿ, ಅವುಗಳಲ್ಲಿ 15000 ಜನ ನೌಕರರ ಕಾರ್ಯನಿರ್ವಹಿಸುತ್ತಿದ್ದು ತಾವುಗಳು ಈ ಮುಷ್ಕರದಲ್ಲಿ ಪಾಲ್ಗೊಳ್ಳುವ ನಿಮಿತ್ತ ಕಚೇರಿ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದ್ದು ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಸಂಘದ ರಾಜ್ಯಾಧ್ಯಕ್ಷ ಸಿ.ಆರ್.ದೀನಬಂಧು ಅವರು ಮಾತನಾಡಿ, ಹಳೆ ಪಿಂಚಣಿ ನೀತಿ ಜಾರಿಯಾಗಬೇಕು, ಕಮಲೇಶ ಚಂದ್ರ ವರದಿಯ ಧನಾತ್ಮಕ ಅಂಶಗಳನ್ನು ಬಲಪಡಿಸಿಬೇಕು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿಗೊಳಿಸಬೇಕು, ಸಿಎಸ್ ಐ ಮತ್ತು ಆರ್ ಐ ಸಿ ಟಿ ಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವುದು, ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜೆಸಿಎ ಕಾರ್ಯದರ್ಶಿ ಎನ್.ವನಜಾಕ್ಷ, ಪದಾಧಿಕಾರಿಗಳಾದ ಪರಮೇಶ್, ಬಸವರಾಜ್, ಮಹದೇವಸ್ವಾಮಿ ಇನ್ನಿತರರು ಗೋಷ್ಠಿಯಲ್ಲಿ ಹಾಜರಿದ್ದರು.

Leave a Comment