ರಾಷ್ಟ್ರಮಟ್ಟದ ಖೋ-ಖೋ ಗೆ ಜಿಲ್ಲೆಯ ಶರತ್ ಆಯ್ಕೆ

ದಾವಣಗೆರೆ.ಆ.4; ಆ.07 ರಿಂದ 10 ವರೆಗೆ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಖೋ-ಖೋ ಮೌಲ್ಯಮಾಪನ ತರಬೇತಿ ಶಿಬಿರಕ್ಕೆ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುವಾದ ಶರತ್ ಜೆ. ಜಿ. ಇವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುತ್ತಾರೆ.
ಈ ಕ್ರೀಡಾಪಟು ಫೆ.18 ರ ಮಾಹೆಯಲ್ಲಿ ಆಂದ್ರಪ್ರದೇಶ ಮತ್ತು ದೆಹಲಿಯಲ್ಲಿ ನಡೆದ ಎಸ್.ಜಿ.ಎಫ್.ಐ. ಹಾಗೂ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಖೋ-ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸಿ, ಕಂಚಿನ ಪದಕ ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ. ಅಲ್ಲದೇ ಜು.18ರ ಮಾಹೆಯಲ್ಲಿ ಹೈದರಾಬಾದ್‍ನಲ್ಲಿ ನಡೆದ ಜ್ಯೂನಿಯರ್ ದಕ್ಷಿಣ ಭಾರತ ಖೋ-ಖೋ ಚಾಂಪಿಯನ್‍ಷಿಪ್‍ನಲ್ಲಿ ರಾಜ್ಯ ತಂಡದಿಂದ ಭಾಗವಹಿಸಿ ಕಂಚಿನ ಪದಕ ಪಡೆದಿದ್ದು, ರಾಷ್ಟ್ರಮಟ್ಟದ ಖೋ-ಖೋ ಕ್ರೀಡೆಯಲ್ಲಿಯೂ ಉತ್ತಮ ಸಾಧನೆ ಮಾಡಲೆಂದು ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ಶ್ರೀನಿವಾಸ ಶುಭ ಕೋರಿರುತ್ತಾರೆ.

Leave a Comment