ರಾಷ್ಟ್ರಮಟ್ಟಕ್ಕೆ ಪ್ರೇಕ್ಷಾ ಕರ್ಕೆರಾ ಆಯ್ಕೆ

ಮಂಗಳೂರು, ಆ.೧೪- ದಿನಾಂಕ ೧೪/೦೮/೨೦೧೯ ರಿಂದ ೨೧/೦೮/೨೦೧೯ ರ ವರಗೆ ಜೀಮ್ಮಿ ಜಾರ್ಜ್ ಓಳಾಂಗಣ ಕ್ರೀಡಾಂಗಣ ತಿರುವನಂತಪುರದಲ್ಲಿ ನಡೆಯಲಿರುವ ಯು.ಟಿ.ಟಿ ರಾಷ್ಟ್ರಮಟ್ಟದ ಟೇಬಲ್-ಟೆನ್ನಿಸ್ ರಾಂಕಿಗ್ ಪಂದ್ಯಾಟದ ೨೦೧೯ ರಲ್ಲಿ ಶ್ರೀ ಚೈತನ್ಯ ಟೇಕ್ನೋ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿ ಪ್ರೇಕ್ಷಾ ಪರೆಶ್ ಕರ್ಕೆರಾ ಕರ್ನಾಟಕದ ಪರವಾಗಿ ಪಾಲ್ಗೋಳಲ್ಲಿದ್ದಾರೆ. ಇವರು ಸಬ್-ಜುನಿಯರ್, ಜುನಿಯರ್, ೧೩-೧೫ ವಿಭಾಗಗಳಲ್ಲಿ ಕರ್ನಾಟಕದ ಪರವಾಗಿ ಪಾಲ್ಗೋಳಲ್ಲಿದ್ದಾರೆ. ಇವರು ಶಾಲೆಯ ದೈಹಿಕ ಶಿಕ್ಷಕ ವಿರೇಶ್ ಮಠಪತಿಯವರಿಂದ ಮಠಪತಿ ಟೇಬಲ್ ಟೇನ್ನಿಸ್ ಆಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪಂದ್ಯಾಟದಲ್ಲಿ ಯಶಸ್ವಿಯಾಗಿ ವಿಜಯಸಾದಿಸಲೆಂದು ಶಾಲೆಯ ಪ್ರಾಂಶುಪಾಲೆ ರೂಪಾ ಶಣೈ ಎ.ಜಿ.ಎಂ ಮುರುಳ ಪ್ರಸನ್ನ ಕಮಾರ್ ಡೀನ್ ಗೌತಮ್ ದೈಹಿಕ ಶಿಕ್ಷಕಿ ಭವ್ಯ ಸಾಲಿಯನ್ ಮತ್ತು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆ

Leave a Comment