ರಾಯಲ್ ಕಾಲೋನಿಯಲ್ಲಿ ಚರಂಡಿ ಕಾಲುವೆ  ರಾಮಯ್ಯ ಕಾಲೋನಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ಬಳ್ಳಾರಿ, ಮೇ.29: ನಗರದ ರಾಯಲ್ ಕಾಲೋನಿಯಲ್ಲಿ ತೆರದ ಚರಂಡಿ ಕಾಲುವೆ ಮತ್ತು ರಾಮಯ್ಯ ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಇಂದು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಚಾಲನೆ ನೀಡಿದ್ದಾರೆ.

ರಾಯಲ್ ಕಾಲೋನಿಯಲ್ಲಿ ನೆಹರೂ ಕಾಲೋನಿಯಿಂದ ರೈಲ್ವೇ ಮಾರ್ಗ ದಾಟಿ ಬರುತ್ತಿದ್ದ ಚರಂಡಿ ನೀರು ಮಳೆಗಾಲದಲ್ಲಿ ಈ ಕಾಲೋನಿಯ ಗುಡಿಸಲು, ಮನೆಗಳಿಗೆ ನುಗ್ಗುತ್ತಿತ್ತು.
ಇದರಿಂದ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಜನ ಅನುಭವಿಸುತ್ತಿದ್ದ ಸಂಕಷ್ಟ ಹೇಳತೀರದಾಗಿತ್ತು. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದರು.
ಆದರೆ ಇಲ್ಲಿ ಈ ತೆರೆದ ಚರಂಡಿಯ ರಾಜ ಕಾಲುವೆ ನಿರ್ಮಿಸುವ ಕಾಮಗಾರಿಗೆ ಚಾಲನೆ ದೊರೆತಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.
ಇನ್ನೊಂದೆಡೆ ರಾಮಯ್ಯ ಕಾಲೋನಿಯಲ್ಲಿ ಜಿಲ್ಲಾ ಖನಿಜ ನಿಧಿಯಿಂದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಕಾಮಗಾರಿ ಆರಂಭವಾಗಿತ್ತಿದ್ದು ಈ ಭಾಗದ ಜನತೆ ಇನ್ನು ಮುಂದೆ ಸ್ವಚ್ಛ ಪರಿಸರದಲ್ಲಿ ಬದುಕಬಹುದು ಎಂದರು.

ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಆಯುಕ್ತ ಈರಪ್ಪ ಬಿರಾದಾರ್, ಇಂಜಿನೀಯರ್ ರವಿಶಂಕರ್, ಪಾಲಿಕೆ ಮಾಜಿ ಸದಸ್ಯರುಗಳಾದ ಶ್ರೀನಿವಾಸ ಮೋತ್ಕರ್, ಮುಖಂಡರುಗಳಾದ ವೀರಶೇಖರರೆಡ್ಡಿ, ಜ್ಯೋತಿ ಪ್ರಕಾಶ್, ಪ್ರಭುಕುಮಾರ್ ಮೊದಲಾದವರು ಇದ್ದರು.

Share

Leave a Comment