ರಾಮಾಯಣ ಬಯಲಾಟ ಪ್ರದರ್ಶನ

ಬಳ್ಳಾರಿ,ಜ.07: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಾಯೋಜನೆಯಡಿಯಲ್ಲಿ ಶ್ರೀ ಶಿವಾಂಜನೇಯ ಬಯಲಾಟ ಕಲಾ ತಂಡ ಸಿದ್ದಮ್ಮನಹಳ್ಳಿ ಇವರಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಾಮಾಯಣ ಬಯಲಾಟ ಪ್ರದರ್ಶನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತ ಕೆ.ಎಂ. ಮಂಜುನಾಥ್ ವಹಿಸಿದ್ದರು. ಅತಿಥಿಗಳಾಗಿ ಕಲಾವಿದರಾದ ವೀಣಾಕುಮಾರಿ, ಕೆ. ಶರಣಪ್ಪ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಎಸ್.ಕೆ.ತಿಪ್ಪೇಸ್ವಾಮಿ ವಿಠಲಾಪುರ, ಸಿದ್ದಮ್ಮನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಗೋವಿಂದರೆಡ್ಡಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮತ್ತಿತರರು ಉಪಸ್ಥಿತರಿದ್ದರು.

ನಂತರ ನಡೆದ ರಾಮಾಯಣ ಬಯಲಾಟದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವೈ.ರಂಗಾರೆಡ್ಡಿ, ಮುದ್ದಟನೂರು ಹೆಚ್. ತಿಪ್ಪೇಸ್ವಾಮಿ ಅವರ ಸಂಗೀತ ನಿರ್ದೇಶನದಲ್ಲಿ ರಾವಣನ ಪಾತ್ರದಲ್ಲಿ ಸಿದ್ದಮ್ಮನಹಳ್ಳಿಯ ವಿ.ಹೆಚ್. ನಾಗಭೂಷಣ ರೆಡ್ಡಿ, ಆಂಜನೇಯ ಪಾತ್ರದಲ್ಲಿ ಸಿದ್ದಮ್ಮನಹಳ್ಳಿಯ ಬಿ.ಕಲ್ಯಾಣ ಕುಮಾರ ಗೌಡ, ಸೀತಾದೇವಿ ಪಾತ್ರದಲ್ಲಿ ಕೂಡ್ಲಿಗಿ ಕಮಲಮ್ಮ, ಮಂಡೋದರಿಯಾಗಿ ಬಳ್ಳಾರಿಯ ಚಾಮುಂಡೇಶ್ವರಿ ಅವರ ಪಾತ್ರ ಅಭಿನಯ ಜನಮನ ಸೂರೆಗೊಂಡಿತು.

ಕುಡಿತಿನಿ ತಿಪ್ಪೇಸ್ವಾಮಿ ಮದ್ದಲೆ, ಕಲ್ಲುಕಂಬ ಬಿ. ಕುಮಾರಸ್ವಾಮಿ ವೇಷಭೂಷಣ, ಸಾರಥಿಯಾಗಿ ಕೆ. ಪಂಪಾಪತಿ ಹಾಗು ಮುಮ್ಮೇಳದಲ್ಲಿ ಹೆಚ್.ಶಿವರುದ್ರಪ್ಪ, ಹೊಸೂರಪ್ಪ ಹೇಮರೆಡ್ಡಿ ಅವರು ಇದ್ದರು.

Leave a Comment