ರಾಮಮಂದಿರ ನಿರ್ಮಾಣಕ್ಕೆ ಸಂಸದರಿಗೆ ವಿ.ಹೆಚ್.ಪಿ ಮನವಿ

ಬಳ್ಳಾರಿ, ಡಿ.5: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಂಸತ್ತಿನಲ್ಲಿ ಶಾಸನ ರೂಪಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡರು ಮತ್ತು ಕಾರ್ಯಕರ್ತರು ಇಂದು ನಗರದಲ್ಲಿ ಸಂಸದ ಉಗ್ರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಅಶೋಕ್, ಹಿಂದೂ ಜಾಗರಣ ವೇದಿಕೆ ವಿಭಾಗೀಯ ಕಾರ್ಯದರ್ಶಿ ಶ್ರೀರಾಮುಲು ಮೊದಲಾದವರು ಮನವಿ ಪತ್ರ ನೀಡಿ ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರ ನಿರ್ಮಾಣ ಈದೇಶದ ಪ್ರತಿಯೊಬ್ಬ ಹಿಂದು ಪ್ರಜೆಯ ಒತ್ತಾಸೆಯಾಗಿದೆ. ಹಲವು ದಶಕಗಳ ಹೋರಾಟ ಇದಕ್ಕಾಗಿ ನಡೆದಿದೆ.

ಅದಕ್ಕಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಾಗಿ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾವನೆ ಚರ್ಚೆಗೆ ಬಂದಾಗ ಅದನ್ನು ಬೆಂಬಲಿಸಿ ಶಾಸನ ರೂಪಿಸಿ ಎಂದು ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲರಾದ ಸಿದ್ದಾರೆಡ್ಡಿ, ವಿಜಯಲಕ್ಷ್ಮಿ, ಬಜರಂಗದಳದ ಮಂಜುನಾಥ, ಭಾಸ್ಕರ್, ಮಾರುತೇಶ, ಮೊದಲಾದವರು ಪಾಲ್ಗೊಂಡಿದ್ದರು.

Leave a Comment