ರಾಮನಗರದ ಎಲ್ಲ 2,243 ಕರೆಗಳ ಅಭಿವೃದ್ಧಿಗೆ ಕ್ರಮ: ಡಾ. ಅಶ್ವತ್ಥನಾರಾಯಣ

 

ರಾಮನಗರ: ಕೆರೆಗಳ ಪುನಶ್ಟೇತನಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಳೆ ಆರಂಭವಾಗುವ ಮೊದಲೇ ಜಿಲ್ಲೆಯ 2,243 ಕೆರೆ- ಕಟ್ಟೆಗಳ ಅಭಿವೃದ್ಧಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್‌ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

“ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಸಮಪರ್ಕವಾಗಿ ಆಗಬೇಕು. ಮುಖ್ಯವಾಗಿ ಕೆರೆ ಕಟ್ಟೆಗಳ ಅಭಿವೃದ್ಧಿ ಆಗಬೇಕು. ಮಳೆ ಆರಂಭವಾಗುವ ಮೊದಲೇ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡಬೇಕು. ಜಿಲ್ಲೆಯ 2,243 ಕೆರೆಗಳ ಪೈಕಿ 283 ಕೆರೆಗಳು ಅರಣ್ಯ ವಲಯದಲ್ಲಿದ್ದು, ಅವುಗಳ ಅಭಿವೃದ್ಧಿ ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗುವುದು,” ಎಂದು ಅವರು ತಿಳಿಸಿದರು.

“ಅರಣ್ಯ ಭೂಮಿ ಒತ್ತುವರಿಯನ್ನು ತೆರೆವುಗೊಳಿಸಲು ಕ್ರಮ ವಹಿಸಲಾಗುವುದು. ಈ ಸಂಬಂಧ ಇಲಾಖೆಗೆ ಸೂಚನೆ ನೀಡಲಾಗಿದೆ. ಅರಣ್ಯ ಭೂಮಿ ಒತ್ತುವರಿ ಬಗ್ಗೆ ಜನರು ಸಹ ಮಾಹಿತಿ ನೀಡಬಹುದು. ಒತ್ತುವರಿ ಮಾಹಿತಿ ಲಭ್ಯವಾದ ಕೂಡಲೇ ತೆರವುಗೊಳಿಸಲು ಕ್ರಮ ವಹಿಸಲಾಗುವುದು,”ಎಂದರು.

ಜಿಲ್ಲೆ ಜತೆ ಭಾವನಾತ್ಮಕ ಬಂಧ
*ರಾಮನಗರ ನಮ್ಮ ಪೂರ್ವಿಕರ ಸ್ಥಳ, ಹಾಗಾಗಿ ಜಿಲ್ಲೆ ಬಗ್ಗೆ ಭಾವನಾತ್ಮಕ ಬಂಧವಿದೆ. ಜಿಲ್ಲೆಯ ಉಸ್ತುವಾರಿ ದೊರೆತಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ಶಕ್ತಿ ಮೀರಿ ಈ ಭಾಗದ ಅಭಿವೃದ್ಧಿಗೆ ಕೆಲಸ ಮಾಡಲು ಬದ್ಧ ಎಂದ ಅವರು, ಮಾಗಡಿ ಕೆಂಪೇಗೌಡರು ಅಭಿವೃದ್ಧಿ ಮಾಡಿರುವ ಕೆರೆ, ದುರ್ಗ, ದೇವಸ್ಥಾನಗಳನ್ನು ಸಂರಕ್ಷಿಸಲಾಗುವುದು. ಸಮಾಧಿ ಜಾಗವನ್ನು ಸಂಪೂರ್ಣ ಅಭಿವೃದ್ಧಿಗೆ ಆದ್ಯತೆ ನಿಡಲಾಗುವುದು,”ಎಂದು ತಿಳಿಸಿದರು.

ಸೋಮನಾಥ ಕವಿ ಸಮಾಧಿ ಅಭಿವೃದ್ಧಿಗೆ ಒತ್ತು
ಕಲ್ಯ ಬೆಟ್ಟದಲ್ಲಿನ ಬಹು ಭಾಷಾ ವಿಶಾರದ ಪಾಲ್ಕುರಿಕೆ ಸೋಮನಾಥ ಕವಿಯ ಸಮಾಧಿ ಅಭಿವೃದ್ಧಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಾ. ಅಶ್ವತ್ಥನಾರಾಯಣ, “ನಾಡು ನುಡಿಗಾಗಿ ಒಳ್ಳೆ ಕೆಲಸ ಮಾಡಿರುವ ಎಲ್ಲರನ್ನೂ ಗೌರವಿಸುತ್ತೇವೆ. ಅದೇ ರೀತಿ ಸೋಮನಾಥ ಕವಿಯ ಸಮಾಧಿ ಬಗ್ಗೆಯೂ ಗಮನಹರಿಸಿ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ,” ಎಂದು ಹೇಳಿದರು.

Leave a Comment