ರಾಫೆಲ್ ಯುದ್ಧ ವಿಮಾನ ಮುಂದಿನ ವಾರ ವಿಚಾರಣೆ

ನವದೆಹಲಿ, ಸೆ. ೫ ರಾಫೆಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರಕ್ಕೆ ತಡೆನೀಡಲು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯವಿಚಾರಣೆಯನ್ನು ಮುಂದಿನ ವಾರ ನಡೆಸುವುದಾಗಿ ಸುಪ್ರೀಂ ನ್ಯಾಯಾಲಯ ಹೇಳಿದೆ.
ಫ್ರಾನ್ಸ್ – ಭಾರತ ನಡುವಿನ ರಾಫೆಲ್ ಯುದ್ಧ ವಿಮಾನಗಳ ಖರೀದಿ ಪಾರದರ್ಶವಾಗಿಲ್ಲದ ಹಿನ್ನೆಲೆಯಲ್ಲಿ ಈ ವ್ಯವಹಾರಕ್ಕೆ ತಡೆನೀಡಬೇಕು ಎಂದು ಕೋರಿ
ವಕೀಲ ಎಂ ಎಲ್ ಶರ್ಮಾ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯ ಮೂರ್ತಿಗಳದ ಎ.ಎಂ ಖನ್ವೀಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರಿದ್ದ ನ್ಯಾಯ ಪೀಠ, ಅರ್ಜಿಯ ವಿಚಾರಣೆಯನ್ಮು ಮುಂದಿನ ವಾರ ನಡೆಸುವುದಾಗಿ ಹೇಳಿದೆ.

Leave a Comment