ರಾಧಿಕಾ ಪ್ರತಿಭಾವಂತೆ, ನಾನು ಆಕೆಯ ಫ್ಯಾನ್: ಯಶ್

ಬೆಂಗಳೂರು, ಜು 13 -ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ರಾಕಿಂಗ್ ಸ್ಟಾರ್ ಯಶ್ ಅವರ ಮೆಚ್ಚಿನ ಮಡದಿ ರಾಧಿಕಾ ಪಂಡಿತ್ ಅಭಿನಯದ ’ಆದಿಲಕ್ಷ್ಮಿ ಪುರಾಣ’ ಇದೇ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಜೋಡಿಯಾಗಿ ಕಾಣಿಸಿಕೊಂಡಿರುವ ಪತ್ನಿಯ ಚಿತದ ಟ್ರೈಲರ್ ಬಿಡುಗಡೆಗೊಳಿಸಿರುವ ಯಶ್, ಪತ್ನಿಯನ್ನು ಮನಸಾರೆ ಹೊಗಳಿದ್ದಾರೆ
ರಾಧಿಕಾ ಪ್ರತಿಭಾವಂತೆ ಯಾವುದೇ ಕಾರಣಕ್ಕೂ ಅದು ವೇಸ್ಟ್ ಆಗದಂತೆ ನೋಡಿಕೊಳ್ಳುತ್ತೇನೆ ಅವರು ಏನೇ ಮಾಡಿದರೂ, ಯಾವ ಚಿತ್ರದಲ್ಲಿ ಅಭಿನಯಿಸಿದರೂ ಅದನ್ನು ನೋಡಲು ಅಭಿಮಾನಿಗಳಂತೆ ನಾನೂ ಸಹ ಕಾತರದಿಂದ ಕಾಯುತ್ತಿರುತ್ತೇನೆ ಎಂದರು.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ’ಆದಿಲಕ್ಷ್ಮಿ ಪುರಾಣ’ಕ್ಕೆ ಪ್ರಿಯಾ ವಿ ನಿರ್ದೇಶನವಿದ್ದು, ಪ್ರೀತಾ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.
ಲವ್ ಹಾಗೂ ಕಾಮಿಡಿ ಮಿಳಿತಿಗೊಂಡಿರುವ ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ವೀಕ್ಷಿಸಬಹುದು. ಜುಲೈ 19ರಂದು ಬಿಡುಗಡೆಯಾಗುತ್ತಿರುವ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರದಲ್ಲಿ ನೋಡಿ ಹರಸುವಂತೆ ರಾಧಿಕಾ ಪಂಡಿತ್ ಮನವಿ ಮಾಡಿದರು.
’ಆದಿಲಕ್ಷ್ಮಿ ಪುರಾಣ’ ತಾರಾಗಣದಲ್ಲಿ ನಿರೂಪ್ ಭಂಡಾರಿ, ರಾಧಿಕಾ ಪಂಡಿತ್, ತಾರಾ, ಸುಚೇಂದ್ರ ಪ್ರಸಾದ್, ಜೋಸೈಮನ್‌ಮೊದಲಾದವರಿದ್ದಾರೆ.

Leave a Comment