ರಾತ್ರಿ 12ಯೊಳಗೆ ವಿಶ್ವಾಸಮತ ಯಾಚಿಸಿಬೇಕು -ಬಿಎಸ್‌ವೈ ಪಟ್ಟು

ಮಧ್ಯರಾತ್ರಿ 12 ಗಂಟೆಯೊಳಗೆ ಮುಖ್ಯಮಂತ್ರಿ ವಿಶ್ವಾಸ ಮತ ಯಾಚನೆ ಮಾಡಲೇಬೇಕು. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ.

ಮೈತ್ರಿ ಸರಕಾರ ವಿಶ್ವಾಸ ಮತ ಯಾಚನೆಗೆ ಚರ್ಚೆ ನಡೆಸುತ್ತಿರುವಾಗಲೆ ಚರ್ಚೆ ನಡುವೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ವಿಶ್ವಾಸ ಮತ ಯಾತನೆ ಕುರಿತ ಚರ್ಚೆ ಎಷ್ಟು ಹೊತ್ತು ಬೇಕಾದರೂ ನಡೆಯಲಿ.

ಯಾರೂ ಎಷ್ಟು ಬೇಕಾದರೂ ಮಾತನಾಡಲಿ. ಬಿಜೆಪಿಯಿಂದ ಒಂದಿಬ್ಬರು ಒಂದೈದು ನಿಮಿಷ ಮಾತನಾಡುತ್ತೇವೆ. ಆದರೆ 12 ಗಂಟೆಯೊಳಗೆ ವಿಶ್ವಾಸ ಮತ ಯಾಚನೆ ಮಾಡಲೇಬೇಕು. ಇದು ನಮ್ಮ ಮನವಿ ಅಂತ ಸ್ಪೀಕರ್ ಗೆ ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ವಿಶ್ವಾಸಮತವನ್ನು ಮುಂದೂಡುವಂತೆ ಸ್ಪೀಕರ್ ಗೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡೋದಿಲ್ಲ. ಮದ್ಯರಾತ್ರಿಯೊಳಗೆ ಸರಕಾರ ವಿಶ್ವಾಸ ಮತ ಕೋರಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ.

Leave a Comment