ರಾತ್ರಿಯ ಕಾಲು ನೋವಿಗೆ ಕಾರಣಗಳು

ಒಂದು ವೇಳೆ ನಿಮಗೆ ರಾತ್ರಿಯ ವೇಳೆಯಲ್ಲಿಯೇ ಹೆಚ್ಚಾಗಿ ಕಾಲುನೋವುಕಾಣಿಸಿಕೊಳ್ಳುತ್ತಿದ್ದು ನಿದ್ದೆಗೆ ಭಂಗವಾಗುತ್ತಿದ್ದರೆ ಈ ಪರಿಯ ನೋವುಗಳಿಗೆ ಟಿoಛಿಣuಡಿಟಿಚಿಟ ಟeg ಛಿಡಿಚಿmಠಿs ಎಂದು ಕರೆಯುತ್ತಾರೆ. ನಾಕ್ಟರ್ನಲ್ ಎಂದರೆ ರಾತ್ರಿ ಸಮಯದಲ್ಲಿಯೇ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ನೋವು ಕಾಲಿನ ಮೀನಖಂಡ ಮತ್ತು ಪಾದಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಕೆಲವೊಮ್ಮೆ ತೊಡೆಯ ಸ್ನಾಯುಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಈ ನೋವು ನಿದ್ದೆ ಹತ್ತಿದ ಬಳಿಕ ಎಷ್ಟು ಪ್ರಬಲವಾಗಿರುತ್ತದೆ ಎಂದರೆ ಇದರಿಂದ ನಿದ್ದೆಯಿಂದೆಚ್ಚರವಾಗುತ್ತದೆ ಹಾಗೂ ನೋವಿನಿಂದ ಕೂಡಿದ ಸ್ನಾಯುಗಳು ಅತಿಯಾಗಿ ಬಿಗಿಯಾಗಿರುವ ಅನುಭವ ನೀಡುತ್ತವೆ. ಕೆಲವರಲ್ಲಿ ಈ ಸೆಡೆತ ಕೆಲವು ನಿಮಿಷಗಳಿಗೆ ಸೀಮಿತವಾಗಿದ್ದರೆ ಕೆಲವರಲ್ಲಿ ಇಡಿಯ ರಾತ್ರಿ ಮುಂದುವರೆಯಬಹುದು

ಬದಲಾಗುವ ಹವಾಮಾನ: ಅಲ್ಬರ್ಟಾ ವಿಶ್ವವಿದ್ಯಾಲಯದ ಕುಟುಂಬ ಆರೋಗ್ಯ ವಿಭಾಗದ ತಜ್ಞರ ಪ್ರಕಾರ ಈ ಸೆಡೆತಗಳು ಚಳಿಗಾಲಕ್ಕಿಂತಲೂ ಬೇಸಿಗೆಯಲ್ಲಿಯೇ ಹೆಚ್ಚು ಸಾಮಾನ್ಯವಾಗಿರುತ್ತವೆ. ಇದಕ್ಕೆ ವಿವರಣೆ ನೀಡಿದ ಅವರು ಹೀಗೆ ವಿವರಿಸುತ್ತಾರೆ: “ಈ ಸೆಡೆತಕ್ಕೆ ಸ್ನಾಯು-ನರಗಳ ಸಂಬಂಧಿತ ತೊಂದರೆ ಕಾರಣವೇ ಹೊರತು ಕೇವಲ ಸ್ನಾಯುಗಳು ಮಾತ್ರವಲ್ಲ. ಬೇಸಿಗೆಯ ಸಮಯದಲ್ಲಿ ನರಗಳ ಬೆಳವಣಿಗೆ ಮತ್ತು ಘಾಸಿಗೊಂಡ ನರಗಳು ರಿಪೇರಿಗೊಳ್ಳಲು ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ, ಏಕೆಂದರೆ ಬೇಸಿಗೆಯಲ್ಲಿ ವಿಟಮಿನ್ ಡಿ. ಹೆಚ್ಚು ಪ್ರಮಾಣದಲ್ಲಿ ದೊರಕುತ್ತದೆ. ಯಾವಾಗ ನಿಮ್ಮ ದೇಹದಲ್ಲಿ ವಿಟಮಿನ್ ಡಿ. ಗರಿಷ್ಟವಾಗಿರುತ್ತದೆಯೋ ಆಗ ಈ ಕಾರ್ಯವನ್ನು ಆದಷ್ಟೂ ತ್ವರಿತವಾಗಿಸಲು ದೇಹ ಅಗತ್ಯ ಪ್ರಚೋದನೆಗಳನ್ನು ನೀಡುತ್ತದೆ ಹಾಗೂ ಈ ಪ್ರಚೋದನೆಗಳು ಸ್ನಾಯುಗಳ ಸೆಡೆತಕ್ಕೆ ಕಾರಣವಾಗಿರಬಹುದು.

health-jpintpen

ನಿರ್ಜಲೀಕರಣ: ನಿರ್ಜಲೀಕರಣವೂ ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುವ ಸೆಡೆತಕ್ಕೆ ಕಾರಣವಾಗಿರಬಹುದು. ಏಕೆಂದರೆ ನಿರ್ಜಲೀಕರಣದಿಂದ ರಕ್ತದಲ್ಲಿ ಎಲೆಕ್ಟ್ರೋಲೈಟುಗಳ ಸಮತೋಲನ ಏರುಪೇರಾಗುತ್ತದೆ ಹಾಗೂ ಇದು ಸ್ನಾಯುಗಳ ಸೆಡೆತಕ್ಕೆ ಕಾರಣವಾಗಬಹುದು. ಹಾಗಾಗಿ ಒಂದು ವೇಳೆ ರಾತ್ರಿಯ ಸಮಯದಲ್ಲಿ ಸ್ನಾಯುಸೆಡೆತ ಎದುರಾದರೆ ತಕ್ಷಣವೇ ಕೊಂಚ ನೀರನ್ನು ಕುಡಿಯಿರಿ.

ಪೋಷಕಾಂಶಗಳ ಕೊರತೆ: ಕೆಲವೊಮ್ಮೆ ನಮ್ಮ ದೇಹದಲ್ಲಿ ಎದುರಾಗುವ ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯಿಂದಲೂ ಈ ಸೆಡೆತ ಎದುರಾಗಬಹುದು.ಹಾಗಾಗಿ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ ಹಾಗೂ ಪೊಟ್ಯಾಷಿಯಂ ಅಗತ್ಯ ಮಟ್ಟದಲ್ಲಿವೆಯೇ ಎಂದು ಪರೀಕ್ಷಿಸಿಕೊಳ್ಳಿ.

ಅತಿ ಹೆಚ್ಚಿನ ವ್ಯಾಯಾಮ: ಒಂದು ವೇಳೆ ನಿಮ್ಮ ದೇಹ ತಾಳಿಕೊಳ್ಳುವುದಕ್ಕೂ ಹೆಚ್ಚಿನ ವ್ಯಾಯಮ ನಿರ್ವಹಿಸಿದರೂ ಇದು ರಾತ್ರಿಯ ಸ್ನಾಯು ಸೆಡೆತಕ್ಕೆ ಕಾರಣವಾಗಬಹುದು ಮಾಧ್ಯಮದ  ವರದಿಯ ಪ್ರಕಾರ, ಚಲನೆಗೆ ಬಳಸುವ ಸ್ನಾಯುಗಳನ್ನು ಅತಿಯಾಗಿ ಬಳಸುವ ಮೂಲಕ ಈ ಸ್ನಾಯುಗಳು ಅತಿಯಾಗಿ ಬಸವಳಿದು ಸೆಡೆತಕ್ಕೆ ಕಾರಣವಾಗುತ್ತವೆ.

ದಿನವಿಡೀ ನಿಂತೇ ಇರುವುದು: ಒಂದು ವೇಳೆ ದಿನದ ಬಹುತೇಕ ಸಮಯವನ್ನು ನಿಂತೇ ಕಳೆಯುವ ಅನಿವಾರ್ಯತೆ ಇದ್ದರೆ ಈ ವ್ಯಕ್ತಿಗಳಿಗೆ ರಾತ್ರಿ ಸ್ನಾಯುಗಳ ಸೆಡೆತ ಎದುರಾಗಬಹುದು. ಈ ವಿಷಯಕ್ಕೆ ನೀಡಲಾಗುವ ವಿವರಣೆ ಎಂದರೆ ನಿಂತಿದ್ದಷ್ಟೂ ಹೊತ್ತು ನಮ್ಮ ದೇಹದ ದ್ರವಗಳಾದ ರಕ್ತ ಮತ್ತು ನೀರು ದೇಹದ ಕೆಳಭಾಗದಲ್ಲಿ ಹೆಚ್ಚು ಸಂಗ್ರಹಗೊಳ್ಳುತ್ತವೆ ಹಾಗೂ ಇದು ದೇಹದಲ್ಲಿ ದ್ರವದ ಅಸಮತೋಲನಕ್ಕೆ ಕಾರಣವಾಗಬಹುದು, ತನ್ಮೂಲಕ ಸ್ನಾಯು ಸೆಡೆತ ಎದುರಾಬಹುದು.

ವಯಸ್ಸಿನ ಪ್ರಭಾವ: ಒಂದು ವೇಳೆ ನಿಮಗೆ ಐವತ್ತು ದಾಟಿದ್ದು ರಾತ್ರಿಯ ಸಮಯದಲ್ಲಿ ಸೆಡೆತಗ್ಗಳು ಕಾಣಿಸಿಕೊಳ್ಳುತ್ತಿದ್ದರೆ ಇದಕ್ಕೆ ನಿಮ್ಮ ವಯಸ್ಸು ಕಾರಣವಾಗಿರಬಹುದು. ಐವತ್ತರ ಪ್ರಾರಂಭದ ಸಮಯದಲ್ಲಿ ನಮ್ಮ ನರಗಳಿಂದ ಮೋಟಾರ್ ನ್ಯೂರಾನ್ ಎಂಬ ಕಣಗಳು ಶಾಶ್ವತವಾಗಿ ನಷ್ಟಗೊಳ್ಳತೊಡಗುತ್ತವೆ ಹಾಗೂ ಈ ಸಮಯದಲ್ಲಿ ಸ್ನಾಯುಗಳ ಸೆಡೆತ ಸಾಮಾನ್ಯವಾಗಿ ಕಂಡುಬರುತ್ತದೆ.

ಇತರ ಆರೋಗ್ಯ ಸಂಬಂಧಿ ಸ್ಥಿತಿಗಳು: ಕೆಲವು ಕಾಯಿಲೆಗಳಾದ ಸಂಧಿವಾತ, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಖಿನ್ನತೆಯೂ ಸೆಡೆತಕ್ಕೆ ಕಾರಣವಾಗಹುದು. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕಂಡುಕೊಂಡಂತೆ ಈ ಅನಾರೋಗ್ಯಗಳು ನರಗಳನ್ನು ದುರ್ಬಲವಾಗಿಸುತ್ತವೆ ಹಾಗೂ ಇದೇ ಕಾಲುಗಳಲ್ಲಿ ನೋವು ಎದುರಾಗಲು ಕಾರಣವಾಗುತ್ತವೆ.

ಗರ್ಭಾವಸ್ಥೆ: ಒಂದು ವೇಳೆ ನೀವು ಗರ್ಭವತಿಯಾಗಿದ್ದರೆ ನಿಮ್ಮ ದೇಹದಲ್ಲಿ ಆಗುವ ಹಲವಾರು ಬದಲಾವಣೆಗಳಿಂದಾಗಿ ರಕ್ತಪರಿಚಲನೆ ಸಹಾ ಬಾಧೆಗೊಳ್ಳುತ್ತದೆ. ಪರಿಣಾಮವಾಗಿ ರಾತ್ರಿಯ ಸಮಯದಲ್ಲಿ ಈ ಸ್ನಾಯುಗಳಿಗೆ ಅಗತ್ಯ ಪ್ರಮಾಣದ ರಕ್ತ ಸರಬರಾಜು ಆಗದೇ ಹೋಗುತ್ತದೆ ಹಾಗೂ ಸೆಡೆತ ಎದುರಾಗುತ್ತದೆ. ಅಮೇರಿಕಾ ಗರ್ಭವತಿಯರ ಸಂಘದ ಪ್ರಕಾರ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಶರೀರ ತಾಯಿಯ ದೇಹವನ್ನು ಒಳಗಿನಿಂದ ಒತ್ತುತ್ತಾ ಇರುವ ಕಾರಣ ಈ ಒತ್ತಡದಿಂದ ನರಗಳು ಸಂಚುಚಿತಗೊಳ್ಳುತ್ತವೆ ಹಾಗೂ ಮುಂದಿನ ಭಾಗಗಳಿಗೆ ಅಗತ್ಯ ಪ್ರಮಾಣದ ರಕ್ತವನ್ನು ಒದಗಿಸಲು ಸಾಧ್ಯವಾಗದೇ ಸೆಡೆತ ಎದುರಾಗುತ್ತದೆ.

Leave a Comment