ರಾಜ್ ಕುಮಾರ್ ರಸ್ತೆ 80 ಅಡಿ ವಿಸ್ತರಣೆ ನಿರ್ಧಾರ:ಕೆ.ಸಿ.ಕೆ

ಬಳ್ಳಾರಿ, ಜೂ.3: ನಗರದ ಗಡಿಗಿ ಚೆನ್ನಪ್ಪ ವೃತ್ತದಿಂದ ಇಂದಿರಾ ವೃತ್ತದ ವರೆಗಿನ ಡಾ.ರಾಜ್ ಕುಮಾರ್ ರಸ್ತೆಯನ್ನು 80 ಅಡಿ ಅಗಲಕ್ಕೆ ವಿಸ್ತರಿಸಲು ನಿರ್ಧರಿಸಿದೆ ಎಂದು ವಿಧಾನ ಸಭೆಯ ಭರವಸೆಗಳ ಸಮಿತಿಯ ಅಧ್ಯಕ್ಷ ಕೆ.ಸಿ.ಕೊಂಡಯ್ಯ ಹೇಳಿದ್ದಾರೆ.

ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಪಾಲಿಕೆ, ಲೋಕೋಪಯೋಗಿ ಈ ರಸ್ತೆಯಲ್ಲಿನ ಆರ್.ಟಿ.ಹೆಚ್, ಹೊಯ್ಸಳ, ಡಾ.ಮಹಂತೇಶ್, ಗಣೇಶ್ ಮೆಡಿಕಲ್, ಅನ್ನಪೂರ್ಣ ಮೋಟಾಱ್ಸ್ ಪಂಚಪ್ಪ ಮೊದಲಾದವರ ಕಟ್ಟಡಗಳಿಗೆ ವಾಣಿಜ್ಯ ಕಟ್ಟಡಗಳಾದರೆ ಪ್ರತಿ ಚದುರ ಅಡಿಗೆ 7500 ರೂಪಾಯಿ ಮತ್ತು ವಸತಿ ಕಟ್ಟಡಗಳಾದರೆ 3500 ರೂಪಾಯಿ ಪರಿಹಾರ ನೀಡುವುದಕ್ಕೆ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಪರ್ಯಾಯ ನೀಡುವುದಕ್ಕೋಸ್ಕರವೇ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿತ್ತು. ಈಗ ಈ ತಿಂಗಳ 10ರೊಳಗೆ ಸರ್ವೆ ನಡೆಸಿ ಪರ್ಯಾಯದ ಮೊತ್ತ ಬಗ್ಗೆ ವರದಿ ತಯಾರಿಸಿ ಜೂ.11ರಂದು ಸಂಬಂಧಪಟ್ಟ ಕಟ್ಟಡಗಳ ಮಾಲೀಕರ ಜೊತೆ ಸಭೆ ಕರೆದು ಒಪ್ಪಂದ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಎಲ್ಲಾ ಪ್ರಕ್ರಿಯೆ ಮುಗಿದ ತಕ್ಷಣ ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳಿ ಎಂದು ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

 

Leave a Comment