ರಾಜ್ ಅಭಿಮಾನಕ್ಕೆ ವಿರಾಜ್

ತೆಲುಗಿನ ನಿರ್ದೇಶಕ ನಾಗೇಶ್ ನಾರದಾಸಿ ವರನಟ ಡಾ. ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿ ಹೀಗಾಗಿ ಕನ್ನಡದಲ್ಲಿ ನಿರ್ದೇಶಿಸಿರು ಚಿತ್ರಕ್ಕೆ “ವಿರಾಜ್ ಎಂದು ಹೆಸರಿಟ್ಟಿದ್ದಾರೆ.ವಿದ್ಯಾಭರಣ್ ವಿರಾಜ್ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ.

viraj_131

ಎರಡು ಕುಟುಂಬಗಳ ನಡುವಿನ ಕಥೆಯನ್ನು ಚಿತ್ರರೂಪದಲ್ಲಿ ಕಟ್ಟಿಕೊಡಲಾಗಿದೆ. ಅದರಲ್ಲಿ ಒಂದು ಕುಟುಂಬ ಬಡಬಗ್ಗರ ಬಗ್ಗೆ ಅಪಾರ ಪ್ರೀತಿ ವಿಶ್ವಾಸವೊಂದಿದ್ದರೆ ಮತ್ತೊಂದು ಕುಟುಂಬ ವಿದೇಶದಿಂದ ಬಂದಿರುವುದು. ಹೀಗಾಗಿ ಎರಡು ವಿಭಿನ್ನ ಕುಟುಂಬಗಳ ಮಧ್ಯೆ ಪ್ರೀತಿ ಉಂಟಾದಾಗ ಅದನ್ನು ಉಳಿಸಿಕೊಳ್ಳಲಾಗುತ್ತದೆಯೋ ಇಲ್ಲ ಮುಂದೇನು ಎನ್ನುವುದು ಚಿತ್ರದ ತಿರುಳು ಎಂದು ಹೇಳಿಕೊಂಡರು ನಾಯಕ ವಿದ್ಯಾಭರಣ್. ಈ ಮುಂದೆ ಚಾಕಲೇಟ್ ಬಾಯ್ ಚಿತ್ರ ಆರಂಭವಾಗಿತ್ತು.

viraj_106ಅದು ಕಾರಣಾಂತರದಿಂದ ಅರ್ಧಕ್ಕೆ ನಿಂತು ಹೋಗಿತ್ತು. ಈಗ ವಿರಾಜ್ ಚಿತ್ರಕ್ಕೆ ಸೋಧರ ಮಾವ ಮಂಜುನಾಥ್ ಸ್ವಾಮಿ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್,ಕಾಮಿಡಿ,ಆಕ್ಷನ್,ಎಮೋಷನ್ ಕೂಡ ಚಿತ್ರದಲ್ಲಿದ್ದು ನಾಲ್ಕು ಫೈಟುಗಳಿವೆ ಚಿತ್ರವನ್ನು ಬೆಂಗಳೂರು, ಮೈಸೂರು ಮತ್ತು ಹಾಸನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಡವರನ್ನು ಯಾವುದೇ ಕಾರಣಕ್ಕೂ ನಿಂದಿಸಬೇಡಿ. ಬಡವರನ್ನು ಮತ್ತು ಅನ್ನದಾತ ರೈತನನ್ನು ಗೌರವಿಸಿ ಎಂದು ಹೇಳಲಾಗುತ್ತಿದೆ ಎಂದು ಹೇಳಿಕೊಂಡರು.

ನಿರ್ದೇಶಕ ನಾಗೇಶ್, ಕನ್ನಡದಲ್ಲಿ ಮೊದಲ ಚಿತ್ರ.ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ ಎಂದರು.

ನಿರ್ಮಾಪಕ ಮಂಜುನಾಥ್ ಸ್ವಾಮಿ,ಅಳಿಯನಿಗಾಗಿ ಚಿತ್ರ ನಿರ್ಮಾಣ ಮಾಡಿರುವುದಾಗಿ ತಿಳಿಸಿದರು. ನಾಯಕನ ತಾಯಿ ಶಶಿಕಲಾ ಶಿವಕುಮಾರ್ ಈ ಸಂದರ್ಭದಲ್ಲಿ ಜೊತೆಗಿದ್ದರು. ಶಿರಿನ್ ಕಾಂತ್ವಾಲ, ನಿಖಿತ ಬೆಸ್ಟ್ ಚಿತ್ರಕ್ಕೆ ನಾಯಕಿಯರು. ಸುಭಾಷ್ ಆನಂದ್ ೭ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

 

Leave a Comment