ರಾಜ್ಯ ಸರ್ಕಾರಕ್ಕೆ 10 ದಿನಗಳ ಗಡವು

ಹುಬ್ಬಳ್ಳಿ,ಸೆ 8-ಕೇಲ ಕಾಂಗ್ರೆಸ್ ಮುಖಂಡರಾದ ಅನಿಲಕುಮಾರ ಪಾಟೀಲ್ ಹಾಗೂ ವೇದವ್ಯಾಸ ಕೌಲಗಿ, ಹೇಳಿಕೆ ನೀಡಿ ಅವಳಿ ನಗರಕ್ಕೆ ಸಂಸದ  ಪ್ರಲ್ಹಾದ ಜೋಶಿ ರವರಕೊಡುಗೆ ಹಾಗೂ  ಜಗದೀಶ ಶೆಟ್ಟರಕೊಡುಗೆ ಶುನ್ಯಎಂದು ಹೇಳಿದ್ದು, ಖಂಡನಿಯವಾಗಿದ್ದು ನಿಮಗೆ ತಾಕತ್ತಯಿದ್ದರೆ ಈ ರೀತಿ ಹೇಳಿಕ ನೀಡುವುದನ್ನು ಬಿಟ್ಟು ಮಾಹನಗರ ಪಾಲಿಕೆಗೆ ಬರಬೇಕಾದ 115 ಕೋಟಿ ರೂ.ಗಳನ್ನು ನಿಮ್ಮದೆಆದ ಸರ್ಕಾರಇದೆ ಬಿಡುಗಡೆ ಮಾಡಿಸಿದರೆ ನಿಮ್ಮನ್ನುರಾಣಿಚೆನ್ನಮ್ಮಾ ವೃತ್ತದಲ್ಲಿಕರೆದು ಸನ್ಮಾಸಿತ್ತೆನೆಂದು ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಸವಾಲು ಹಾಕಿದ್ದಾರೆ.
ಅವಳಿ ನಗರದ ರಸ್ತೆಗಳ ಅಭಿವೃದ್ಧಿ ವಿಷಯದಲ್ಲಿ ನಮ್ಮ ಮುಖಂಡರುಕೇಂದ್ರ ಸರ್ಕಾರದಿಂದ ಸಿ.ಆರ್.ಎಫ್ ಅನುದಾನದಲ್ಲಿ ಸಾಕಷ್ಟು ಅನುದಾನತರುತ್ತಿದ್ದು, ನಿಮಗೆ ಗೊತ್ತಿಲ್ಲವೆ?ಅವಳಿ ನಗರದಅಭಿವೃದ್ಧಿ ವಿಷಯಕ್ಕೆಎಲ್ಲಿ ಬೇಕಾದರು ಬಂದುಚರ್ಚಿಸಲು ವೇದಿಕೆಯನ್ನು ನಿವೆ ಸಿದ್ದಪಡಿಸಿ ಅದಕ್ಕೆ ನಾವು ಬರುತ್ತೆವೆಎಂದು ಸವಾಲನ್ನು ಎಸಿದಿದ್ದಾರೆ.ಇನ್ನು 10 ದಿನಗಳಲ್ಲಿ ಪಾಲಿಕೆಗೆ ಬರಬೇಕಾದ 115 ಕೋಟಿ ರೂ.ಗಳನ್ನು ಸರ್ಕಾರದಿಂದ ಬರದೆಯಿದ್ದರೆ  ಪ್ರಲ್ಹಾದ ಜೋಶಿ ಹಾಗೂ  ಜಗದೀಶ ಶೆಟ್ಟರರವರ ನೆತೃತ್ವದಲ್ಲಿ ಹುಬ್ಬಳ್ಳಿಯಿಂದ ಧಾರವಾಡ ವರೆಗೆ ಬೃಹತ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು  ತಿಳಿಸಿದ್ದಾರೆ.

Leave a Comment