ರಾಜ್ಯೋತ್ಸವಕ್ಕೆ ರಾಜು ಕನ್ನಡ ಮೀಡಿಯಂ

-ಚಿಕ್ಕನೆಟಕುಂಟೆ ಜಿ.ರಮೇಶ್
ಫಸ್ಟ್ ರ್‍ಯಾಂಕ್ ರಾಜು’ ಚಿತ್ರ ನಿರ್ದೇಶಿಸಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸಿನ ರುಚಿ ಕಂಡಿದ್ದ ನಿರ್ದೇಶಕ ನರೇಶ್ ಕುಮಾರ್ ಹಾಗು ಹಲವು ಯಶಸ್ವಿ ಚಿತ್ರ ನಿರ್ಮಾಣ ಮಾಡಿರುವ ಕೆ.ಎ ಸುರೇಶ್ ಜೊತೆಯಾಗಿದ್ದಾರೆ. ಅದರ ಫಲ ಎನ್ನುವಂತೆ ’ರಾಜು’ ಕನ್ನಡ ಮೀಡಿಯಂ ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಯ ಸನಿಹದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ರಾಜ್ಯೋತ್ಸವಕ್ಕೆ ರಾಜು ತೆರೆಯ ಮೇಲೆ ತೆರೆಗೆ ಬರಲಿದೆ.
ಬಿಡುಗಡೆಯ ಹತ್ತಿರದಲ್ಲಿ ಚಿತ್ರತಂಡ ಧ್ವನಿ ಸುರುಳಿ ಬಿಡುಗಡೆ ಮಾಡಿದೆ. ಈ ವೇಳೆ ಮಾತಿಗಿಳಿದ ನಿರ್ಮಾಪಕ ಕೆ.ಎ ಸುರೇಶ್, ಮಲೆನಾಡು, ಬೆಂಗಳೂರು ಹಾಗು ವಿದೇಶದಲ್ಲಿ ಕಥೆಗೆ ಪೂರಕವಾಗಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ನಟ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇನ್ನುಳಿದಂತೆ ಹಾಡೊಂದರಲ್ಲಿ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್, ಪ್ರಥಮ್, ಕಿರಿಕ್ ಕೀರ್ತಿ, ಇಂದ್ರಜಿತ್ ಲಂಕೇಶ್ ಸೇರಿದಂತೆ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಮತ್ತೊಂದು ಹಾಡಿನಲ್ಲಿ ಚಂದನ್ ಶೆಟ್ಟಿ ಹಾಡು ಬರೆದು ಅಭಿನಯಸಿದ್ದಾರೆ. ಈ ತಿಂಗಳ ೨೭ ರಂದು ಚಿತ್ರವನ್ನು ಸುಮಾರು ೨೦೦ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ತರುವ ಗುರಿ ಹಾಕಿಕೊಳ್ಳಲಾಗಿದೆ. ಒಂದು ರೀತಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ರಾಜು ತೆರೆಗೆ ತರಲಾಗುತ್ತಿದೆ.
ಚಿತ್ರದಲ್ಲಿ ಅಭಿನಂದನ್‌ಗೆ ನಾಯಕಿಯರಾಗಿ ಅವಂತಿಕಾ ಶೆಟ್ಟಿ, ಆಶಿಕಾ ಮತ್ತು ವಿದೇಶಿ ಬೆಡಗಿ ಏಂಜಲೀನಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಧುಕೋಕಿಲ,ಕುರಿಪ್ರತಾಪ್, ಹಿರಿಯ ಕಲಾವಿದರಾದ ಅಶೋಕ್, ಸುಚೇಂದ್ರ ಪ್ರಸಾದ್ ಸೇರಿದಂತೆ ಮತ್ತಿತರ ತಾರಾಗಣವಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಫಸ್ಟ್ ರ್‍ಯಾಂಕ್ ಚಿತ್ರದಲ್ಲಿದ್ದಂತೆ ರಾಜು ಕನ್ನಡ ಮೀಡಿಯಂನಲ್ಲಿಯೂ ವಿಷಯಾಧರಿತ ಸಂದೇಶವಿದೆ. ಜೊತೆಗೆ ಚಿತ್ರವನ್ನು ಕಮರ್ಷಿಯಲ್ ದೃಷ್ಟಿಯಲ್ಲಿ ಹೇಗೆ ಜನರಿಗೆ ತಲುಪಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಹಲವು ಅಂಶಗಳು ಚಿತ್ರದಲ್ಲಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ.ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.
ನಿರ್ದೇಶಕ ನರೇಶ್ ಕುಮಾರ್, ಚಿತ್ರದಲ್ಲಿ ಮೂರು ಪ್ರಮುಖ ಘಟ್ಟಗಳು ಬರಲಿದೆ. ಹಳ್ಳಿಯಿಂದ ಬೆಂಗಳೂರು, ಆ ನಂತರ ವಿದೇಶ ಹೀಗೆ ಕಥೆಗೆ ಪೂರಕವಾಗಿ ಚಿತ್ರೀಕರಣ ಮಾಡಿದ್ದೇವೆ. ಎಲ್ಲಿಯೂ ಯಾರಿಗೂ ಬೋರ್ ಅನ್ನಿಸುವುದಿಲ್ಲ. ಮತ್ತೊಂದು ಯಶಸ್ವಿನ ನಿರೀಕ್ಷೆಯಲ್ಲಿದ್ದು ಜನ ಹೇಗೆ ಸ್ವೀಕರಿಸುತ್ತಾರೋ ಕಾದುನೋಡಬೇಕು. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದ್ದೇವೆ. ಜೊತೆಗೆ ಚಿತ್ರದಲ್ಲಿ ಹಿರಿಯ ಕಲಾವಿದರಿದ್ದು ಅದು ಪೂರಕವಾಗಿದೆ.

ಬೆಂಗಳೂರು, ಅಮೇರಿಕಾ ದ್ವೀಪದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ ಜರ್ನಿಯ ಮೂಲಕ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಹೀಗಾಗಿ ಎಲ್ಲರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಎಂದರು. ನಟ ಗುರುನಂದನ್,ಹಳ್ಳಿಯ ಹುಡುಗನೊಬ್ಬ ಬೆಂಗಳೂರಿಗೆ ಬಂದು, ಉದ್ಯಮದಲ್ಲಿ ಯಶಸ್ಸು ಕಂಡು ವಿದೇಶಕ್ಕೆ ಹೋಗುವ ಪಾತ್ರ. ಈ ಹಂತದಲ್ಲಿ ಎದುರಿಸುವ ಸಮಸ್ಯೆ ಮತ್ತು ಸವಾಲುಗಳನ್ನು ಕಮರ್ಷಿಯಲ್ ಅಂಶದೊಂದಿಗೆ ತೆರೆಯ ಮೇಲೆ ತರಲಾಗಿದೆ ಎಂದರೆ, ನಾಯಕಿಯರಲ್ಲಿ ಒಬ್ಬರಾದ ಆಶಿಕಾ, ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರದ ಮೂಲಕ ಮತ್ತಷ್ಟು ಅವಕಾಶಗಳು ಬರಲಿವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

Leave a Comment