ರಾಜ್ಯಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಕುರಿತು ಚರ್ಚೆ

ನವದೆಹಲಿ, ಡಿ 3 -ದೇಶದಲ್ಲಿ ಗಗನಕ್ಕೇರಿರುವ ಈರುಳ್ಳಿ ಬೆಳೆಯ ಕುರಿತು ರಾಜ್ಯಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಸಿಪಿಐ- ಎಂ ಸಂಸದ ಕೆ.ಕೆ.ರಾಗೇಶ್, ದೇಶಾದ್ಯಂತ 32 ಸಾವಿರ ಟನ್ ಈರುಳ್ಳಿ ಕೊಳೆತುಹೋಗುತ್ತಿದೆ. ಇದನ್ನ ತಡೆಯಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ದರ ಏರಿಕೆಯನ್ನು ತಡೆಯಬೇಕು ಎಂದು ಮನವಿ ಮಾಡಿದರು.

ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ರಾಗೇಶ್, ದೇಶದ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ನೂರು ರೂಪಾಯಿ ದಾಟಿದೆ. ದರ ಹೆಚ್ಚಳದಿಂದ ಈರುಳ್ಳಿ ಖರೀದಿಸುವವರು ಕಡಿಮೆಯಾದ್ದರಿಂದ ಸುಮಾರು 32 ಸಾವಿರ ಟನ್  ಈರುಳ್ಳಿ ಕೊಳೆತುಹೋಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಕೊಳೆತುಹೋಗುವ ಬದಲಿಗೆ ಆ ಈರುಳ್ಳಿಗಳನ್ನು ಸರ್ಕಾರ ಖರೀದಿಸಿ ಅದನ್ನು ಅಗತ್ಯವಿದ್ದವರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

 ಭಾರತ ವಿಶ್ವದಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ದೇಶವಾಗಿದೆ. ಆದರೆ ಪ್ರತಿ ವರ್ಷ ನವೆಂಬರ್ , ಡಿಸೆಂಬರ್ ತಿಂಗಳಲ್ಲಿ ಈರುಳ್ಳಿ ಕೊರತೆ ಎದುರಾಗುತ್ತದೆ. ಇದು ಆತಂಕದ ವಿಷಯ ಎಂದರು.

Leave a Comment