ರಾಜ್ಯಸಭಾ ಸದಸ್ಯ ಎಂ ಪಿ ವೀರೇಂದ್ರ ಕುಮಾರ್ ವಿಧಿವಶ : ಪ್ರಧಾನಿ, ರಾಹುಲ್ ಸಂತಾಪ

ನವದೆಹಲಿ, ಮೇ 29- ರಾಜ್ಯಸಭಾ ಸದಸ್ಯ ಎಂ ಪಿ ವೀರೇಂದ್ರ ಕುಮಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಮೋದಿ, “ಎಂ ಪಿ ವೀರೇಂದ್ರ ಕುಮಾರ್ ನಿಧನದಿಂದ ತೀವ್ರ ದುಃಖವಾಗಿದೆ. ಅತ್ಯುತ್ತಮ ಶಾಸಕರು ಹಾಗೂ ಸಂಸದರಾಗಿ ಗುರುತಿಸಿಕೊಂಡಿದ್ದ ಅವರು, ಬಡವರು ಹಾಗೂ ದೀನದಲಿತ ಧ್ವನಿಯಾಗಿದ್ದರು.ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಸಂತಾಪವಿದೆ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ ಮಾತೃಭೂಮಿ ಸಮೂಹದ ಲೇಖಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ ಪಿ ವೀರೇಂದ್ರ ಕುಮಾರ್ ಅವರ ನಿಧನದ ಬಗ್ಗೆ ತಿಳಿದು ಆಘಾತವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಸ್ನೇಹಿತರಿಗೆ ನನ್ನ ಸಂತಾಪ, ” ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ

Share

Leave a Comment