ರಾಜ್ಯಸಭಾ ಸದಸ್ಯರಾಗಿ ನೀರಜ್ ಶೇಖರ್ ಪ್ರಮಾಣ

  ನವದೆಹಲಿ, ಸೆ 12 – ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ರಾಜ್ಯಸಭಾ ಸದಸ್ಯರಾಗಿ ಸಂಸತ್ ಭವನದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ

  ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ನೀರಜ್ ಭಾರತೀಯ ಜನತಾ ಪಕ್ಷಕ್ಕ ಸೇರ್ಪಡೆಯಾಗಿದ್ದರು.  ಉತ್ತರ ಪ್ರದೇಶದಿಂದ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಇದರೊಂದಿಗೆ ಉತ್ತರ ಪ್ರದೇಶವು ರಾಜ್ಯಸಭೆಗೆ 31 ಸದಸ್ಯರನ್ನು ನೀಡಿದಂತಾಗಿದೆ.

  “ರಾಜ್ಯಸಭೆಗೆ ಉತ್ತರಪ್ರದೇಶದಿಂದ ನಡೆದ ಉಪಚುನಾವಣೆಯಲ್ಲಿ ಪುನರಾಯ್ಕೆಯಾದ ಭಾರತೀಯ ಜನತಾ ಪಕ್ಷದ ನೀರಜ್ ಶೇಖರ್ ಅವರಿಗೆ ಅಧ್ಯಕ್ಷರು ತಮ್ಮ ಕೊಠಡಿಯಲ್ಲಿ ಪ್ರಮಾಣ ವಚನ ಬೋಧಿಸಿದರು” ಎಂದು ರಾಜ್ಯಸಭಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

  ನೀರಜ್ ಶೇಖರ್ ಅವರು ಮೊಟ್ಟ ಮೊದಲ ಬಾರಿಗೆ 2014ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.  2019 ಜುಲೈ 15ರಂದು ರಾಜೀನಾಮೆ ನೀಡಿ, 2019 ಆಗಸ್ಟ್ ನಲ್ಲಿ ನಡೆದ ಚುನಾವಣೆಯಲ್ಲಿ ಪುನರಾಯ್ಕೆಯಾದರು.  ಇವರು 14 ಮತ್ತು 15ನೇ ಲೋಕಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

 

Leave a Comment