ರಾಜ್ಯಮಟ್ಟದ ಜನಪದ ಗೀತಗಾಯನ ಸ್ಪರ್ಧೆ

ದಾವಣಗೆರೆ.ಜು.18; ನಗರದ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯಲ್ಲಿ ಜು.21 ರಂದು ಬೆಳಗ್ಗೆ 7ಕ್ಕೆ ದಿ.ಟಿ.ಕೆ ಗೌಡ ಸ್ಮರಣಾರ್ಥ ರಾಜ್ಯಮಟ್ಟದ ಜನಪದ ಗೀತಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷ ಎಂ.ದ್ವಾರಕೀಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಘಟಕ, ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ, ಆದಮ್ಯ ಕಲಾ ಸಂಸ್ಥೆ ಸಹಯೋಗದಲ್ಲಿ ಜರುಗುವ ಈ ಸ್ಪರ್ಧೆಗೆ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಲಿದ್ದಾರೆ.ವಿಶೇಷವೆಂದರೆ ಜಾನಪದ ಸೊಗಡು ಬಿಂಬಿಸುವ ವೇಷಭೂಷಣ ಹಾಗೂ ಪರಿಕರದೊಂದಿಗೆ ಗಾಯನ ನಡೆಯಲಿದೆ.ಬೆಳಗ್ಗೆ 11ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು ಶಾಸಕ ಶಾಮನೂರು ಶಿವಶಂಕರಪ್ಪ ಉಪಸ್ಥಿತರಿರುವರು. ಜಿ.ಪಂ ಸಿಇಒ ಹೆಚ್.ಬಸವರಾಜೇಂದ್ರ ಉದ್ಘಾಟನೆ ನೆರವೇರಿಸಲಿದ್ದಾರೆ.ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ
ಡಾ.ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಸಂಪರ್ಕಾಧಿಕಾರಿ ಗಣನಾಥ ಎಕ್ಕಾರು ,ಹಂಪಿ ಕನ್ನಡ ವಿವಿಯ ಬುಡಕಟ್ಟು ವಿಭಾಗದ ಮುಖ್ಯಸ್ಥ ಡಾ.ಚಲುವರಾಜು, ಡಾ.ಕನಕತಾರಾ, ಸುರೇಶ್ ರೈ ಸೂಡಿಮುಳ್ಳು, ಜಯಣ್ಣ ಮತ್ತಿತರರು ಆಗಮಿಸಲಿದ್ದಾರೆ.ಅಂದು ಸಂಜೆ 6 ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ ಸಂಸದ ಜಿ.ಎಂ ಸಿದ್ದೇಶ್ವರ್ ಬಹುಮಾನ ವಿತರಣೆ ಮಾಡಲಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಆರ್ ಚೇತನ್ ಉಪಸ್ಥಿತರಿರುವರು.ಬೆಳಗಾವಿಯ ಜನಪದ ವಿದ್ವಾಂಸರಾದ ಪ್ರೋ.ಕೆ.ಎಸ್.ಕೌಜಲಗಿ ಸಮಾರೋಪ ಭಾಷಣ ಮಾಡಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಎನ್.ಕೆ.ಕೊಟ್ರೇಶ್, ಗೀತಾಮಾಲತೇಶ್, ಸವಿತಾ ಕೂಲಂಬಿ, ಗಿರಿಧರ್ ಇದ್ದರು.

Leave a Comment