ರಾಜ್ಯದ 10 ಲ್ಯಾಬ್ ಗಳಲ್ಲಿ ಕೊರೋನಾ ಸೋಂಕು ಪರೀಕ್ಷೆ : ಶ್ರೀರಾಮುಲು

ಬಳ್ಳಾರಿ, ಏ.6: ಇಂದಿನ ವರೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತ 151 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇಂದಿನಿಂದ ರಾಜ್ಯದಲ್ಲಿ ಹತ್ತು ಕೊರೋನಾ ಪರೀಕ್ಷೆಯ ಪ್ರಯೋಗಾಲಯಗಳು ಆರಂಭವಾಗಿದ್ದು ಇದರಿಂದ ಒಟ್ಟಾರೆ ರಾಜ್ಯದಲ್ಲಿ 10 ಲ್ಯಾಬ್ ಗಳು ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರಿಂದು ಬಳ್ಳಾರಿ ನಗರದಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅವರೊಂದಿಗೆ ಬಡ ಜನರಿಗೆ ಉಚಿತವಾಗಿ ರೇಷನ್ ಕಿಟ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಕೊರೋನಾ ಸೋಂಕಿನ ಪರೀಕ್ಷೆಯ ಲ್ಯಾಬ್ ಗಳ‌ ಆರಂಭಕ್ಕೆ ಬೇಡಿಕೆ ಇತ್ತು ಇದಕ್ಕೆ‌ ರಾಷ್ಟ್ರೀಯ ವೈರಾಣು ಪರೀಕ್ಷಾ ಪ್ರಯೋಗಾಲಯ ಬಳ್ಳಾರಿಯಲ್ಲೂ ಲ್ಯಾಬ್ ಆರಂಭಕ್ಕೆ ಅನುಮತಿ ನೀಡಿದೆ ಇದರಿಂದಾಗಿ ಕಲುಬುರಗಿ, ಶಿವಮೊಗ್ಗ ಸೇರಿದಂತೆ 10 ಲ್ಯಾಬ್ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ.‌ ಈಗ ಸದ್ಯಕ್ಕೆ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ ದೆಹಲಿಯ ಧಾರ್ಮಿಕ ಕೇಂದ್ರಕ್ಕೆ ಹೋಗಿ ಬಂದವರಿಂದ ಸೋಂಕು ಹರಡುವುದು ಸ್ವಲ್ಪ ಹೆಚ್ಚಾಗಿದೆ.

ದೆಹಲಿ ಕಾರ್ಯಕ್ರಮದಲ್ಲಿ ಭಾಗಿಯಾದವರ ಪೈಕಿ. ರಾಜ್ಯದಲ್ಲಿ 26 ಕೇಸ್ ಪಾಸಿಟಿವ್ ಆಗಿವೆ. ಅಲ್ಲಿಗೆ ಹೋಗಿ ಬಂದವರಿಂದ ಸ್ವಲ್ಪ ಸಂಖ್ಯೆ ಜಾಸ್ತಿಯಾಗುತ್ತಿವೆ. ಇಲ್ಲದಿದ್ದರೆ ಕಡಿಮೆಯಾಗುತ್ತಿದ್ದವು. ಹೋಗಿ ಬಂದವರನ್ನು ಕ್ವಾರೆಂಟೆನ್ ಮಾಡಲಾಗಿದೆ. ಸಾಕಷ್ಟು ಜನರು, ಹೊರ ಬಾರದೇ, ಇರೋ ಕಾರಣ. ಧರ್ಮಗುರುಗಳಿಗೆ ಮನವಿ ಮಾಡಿದ್ದೇವೆ.. ಅಲ್ಲದೆ ಸರ್ಕಾರವೂ ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ ಎಂದರು.
ಬೀದರ್ ನಲ್ಲಿ ನಮಗೆ ಇಂತಹದ್ದೇ ಊಟ ಬೇಕು ಎಂದು ಕ್ವಾರೆಂಟೆನ್ ನಲ್ಲಿರೋ ಮನವಿ ಮಾಡಿದ್ದಾರೆ. ನಮಗೆ, ನಿಮ್ಮ ಸಹಕಾರನೂ ಮುಖ್ಯ ಎಂದು ಅವರಿಗೆ ಮನವಿ ಮಾಡಿದೆಂದು‌ ಕೋರಿದೆಂದರು

ಬಡವರಿಗೆ ದಿನಸಿ ಕೊಡೋ ಕಾರ್ಯ ನಡೆಯುತ್ತಿದೆ.‌ ಬಡವರಿಗೆ ದಾನಿಗಳು ಸಹಾಯ ಮಾಡಲಿ. ಸರಕಾರ ನಾನಾ ಸವಲತ್ತು ಕೊಡುತ್ತಿದೆ ದಾನಿಗಳು ಹೆಚ್ಚೆಚ್ಚು ಮುಂದೆ ಬಂದು ದಾನ ಮಾಡಲು ಅವರು ಮನವಿ‌ ಮಾಡಿದರು.

Leave a Comment