ರಾಜ್ಯದ ಕೊರೋನಾ ಇತಿಹಾಸದಲ್ಲೊಂದು ಮಾದರಿ, ಅಪರೂಪದ ಕಹಾನಿ..!! .

ಬೆಂಗಳೂರು , ಜೂ 27- ಕೊರೊನಾ ಬಂದರೆ ಸತ್ತೆ ಹೊಗುತ್ತೇವೆ ಇನ್ನು ನಮಗೆ ಬದುಕೆಯಿಲ್ಲ ಎನ್ನುವವರಿಗೆ ಇಲ್ಲೊಂದು ಅಪರೂಪದ ಮಾದರಿ , ಕಹಾನಿಯಿದೆ. ರಾಜ್ಯದ ಕೊರೊನಾ ಇತಿಹಾದಲ್ಲಿ ಇದೊಂದು ಅಪರೂಪದ ,ಭರವಸೆಯ ಪ್ರಕರಣ ಎಂದರೂ ಅದು ಅತಿಶೋಯೋಕ್ತಿಯೇನಲ್ಲ .!!.
ರಾಜ್ಯದ ಸಾವಿರಾರು ಕೊರೋನಾ ರೋಗಿಗಳಿಗೆ ಇವರೇ ಸ್ಪೂರ್ತಿ.. ಕರ್ನಾಟಕದಲ್ಲಿ ಇವರೇ ಅತ್ಯಂತ ಹಿರಿಯ ವಯಸ್ಸಿನ ಕೊರೋನಾ ರೋಗಿ ಗುಣಮುಖ ರಾಗಿರುವುದು 99 ತುಂಬಿ 100ನೇ ವಸಂತಕ್ಕೆ ಕಾಲಿಟ್ಟಿದ್ದ ವೃದ್ದೆಗೆ ಎಂಬುದೇ ಕಹಾನಿಯ ವಿಶೇಷ !!
ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತ ವೃದ್ಧೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ,  ವೃದ್ದೆಯ ಪುತ್ರ ಹಾಗೂ ಸೊಸೆ ಮೊಮ್ಮಗನಿಗೂ ಸೋಂಕು ತಗುಲಿತ್ತು ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಕೇವಲ 9 ದಿನಕ್ಕೆ ಗುಣಮುಖ ಆಗಿ ಡಿಸ್ಚಾರ್ಜ್ ಆಗಿದ್ದಾರೆ .

ಕೊರೋನಾದಿಂದ ಗುಣಮುಖರಾಗಿರುವ ವೃದ್ಧೆ ತಮ್ಮ 99ನೇ ಹುಟ್ಟುಹಬ್ಬದ ದಿನವೇ ಆಸ್ಪತ್ರೆಗೆ ದಾಖಲಾಗಿದ್ದು ಮತ್ತೊಂದು ವಿಶೇಷವಾಗಿದೆ. ಇದೆ ಜೂನ್ 18 ರಂದು ವಿಕ್ಟೋರಿಯಾಗೆ ದಾಖಲಾಗಿದ್ದ ವೃದ್ಧೆ 99 ನೇ ವಸಂತ ಪೂರೈಸಿ 100 ನೇ ವರ್ಷಕ್ಕೆ ಕಾಲಿಟ್ಟಿದ್ದು ನಿನ್ನೆ ಸಂಜೆ ಡಿಸ್ಚಾರ್ಜ್ ಆಗಿದ್ದಾರೆ.

100 ವಯಸ್ಸಿನ ವೃದ್ದೆ ಕೊರೊನಾ ಮಹಾಮರಿಯಿಂದ ಗುಣಮುಖ ಆಗಿರುವುದು ವೈದ್ಯಲೋಕಕ್ಕೂ ಸಂತಸವಾಗಿದೆ ಜೀವ ಕಾಪಾವಿದ ಕೊರೊನಾ ವಿರುದ್ದ ಗೆದ್ದ ಅವರು ಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್ ನಲ್ಲಿರುವ ರೋಗಿಗಳಿಗೆಲ್ಲಾ ಧೈರ್ಯ ಹೇಳಿ ಹೊರೆಗೆ ಬಂದಿದ್ದಾರೆ, ಜೊತೆಗೆ ಬೇರೆಯವರಿಗೂ ಮಾದರಿಯಾಗಿದ್ದಾರೆ. ಕರೋನಕ್ಕೆ ಬುದ್ದಿ ಕಲಿಸಿದ್ದಾರೆ. ನಾನು ನಿನಗೆ ಸೋಲುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ.

 

Share

Leave a Comment