ರಾಜ್ಯದಲ್ಲಿ 947 ಹೊಸ ಕೊರೋನಾ ಪ್ರಕರಣಗಳು, 20 ಸಾವು; ಸೋಂಕಿತರ ಸಂಖ್ಯೆ 15,242ಕ್ಕೇರಿಕೆ

ಬೆಂಗಳೂರು, ಜೂ 30 – ರಾಜ್ಯದಲ್ಲಿ ಹೊಸದಾಗಿ 947 ಕೊರೋನಾ ಪ್ರಕರಣಗಳು ವರದಿಯಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ.

ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15,242ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 250 ಮಂದಿ ಮೃತಪಟ್ಟಿದ್ದು, 7918 ಮಂದಿ ಚೇತರಿಕೆಯಾಗಿದ್ದು, 7074 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 271 ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 503, ಬಳ್ಳಾರಿಯಲ್ಲಿ 61, ಹಾವೇರಿಯಲ್ಲಿ 49, ದಕ್ಷಿಣ ಕನ್ನಡದಲ್ಲಿ 44, ಉತ್ತರಕನ್ನಡದಲ್ಲಿ 40, ವಿಜಯಪುರದಲ್ಲಿ 39, ಶಿವಮೊಗ್ಗದಲ್ಲಿ 22, ಬೆಂಗಳೂರು ಗ್ರಾಮಾಂತರದಲ್ಲಿ 21, ಬೀದರ್‌,ಧಾರವಾಡದಲ್ಲಿ ತಲಾ17, ಹಾಸನದಲ್ಲಿ 16, ರಾಯಚೂರು, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರದಲ್ಲಿ ತಲಾ 12, ಚಿಕ್ಕಮಗಳೂರಿನಲ್ಲಿ 10, ಉಡುಪಿ, ಮೈಸೂರಿನಲ್ಲಿ ತಲಾ 9, ಬಾಗಲಕೋಟೆ, ಕೊಡಗಿನಲ್ಲಿ ತಲಾ 4, ಕೋಲಾರ, ಚಿತ್ರದುರ್ಗದಲ್ಲಿ ತಲಾ 3, ಯಾದಗಿರಿ, ಮಂಡ್ಯ, ಬೆಳಗಾವಿ, ಗದಗದಲ್ಲಿ ತಲಾ 2, ತುಮಕೂರಿನಲ್ಲಿ 1 ಪ್ರಕರಣಗಳು ವರದಿಯಾಗಿವೆ.
ಬಳ್ಳಾರಿಯಲ್ಲಿ 31 ವರ್ಷದ ಮಹಿಳೆ, ಹಾವೇರಿಯಲ್ಲಿ 75 ವರ್ಷದ ಮಹಿಳೆ, ವಿಜಯಪುರದಲ್ಲಿ 85 ವರ್ಷದ ಮಹಿಳೆ, ಧಾರವಾಡದಲ್ಲಿ 83 ವರ್ಷದ ವ್ಯಕ್ತಿ, ಕೋಲಾರದಲ್ಲಿ 44 ವರ್ಷದ ವ್ಯಕ್ತಿ, ಬೆಂಗಳೂರು ನಗರದಲ್ಲಿ 63 ವರ್ಷದ ವ್ಯಕ್ತಿ, ಬಳ್ಳಾರಿಯಲ್ಲಿ 55 ವರ್ಷದ ಮಹಿಳೆ, ಬೆಂಗಳೂರು ನಗರದಲ್ಲಿ 45 ವರ್ಷದ ವ್ಯಕ್ತಿ,64 ವರ್ಷದ ಮಹಿಳೆ, 50 ವರ್ಷದ ವ್ಯಕ್ತಿ, ಹಾವೇರಿಯಲ್ಲಿ 60 ವರ್ಷದ ಮಹಿಳೆ, ಬಳ್ಳಾರಿಯಲ್ಲಿ 63 ವರ್ಷದ ಮಹಿಳೆ, ದಾವಣಗೆರೆಯಲ್ಲಿ 50 ವರ್ಷದ ಮಹಿಳೆ, ವಿಜಯಪುರದಲ್ಲಿ 52 ವರ್ಷದ ವ್ಯಕ್ತಿ, ಧಾರವಾಡದಲ್ಲಿ 69 ವರ್ಷದ ವ್ಯಕ್ತಿ, ಬೆಳಗಾವಿಯಲ್ಲಿ 32 ವರ್ಷದ ವ್ಯಕ್ತಿ, ಮೈಸೂರಿನಲ್ಲಿ 36 ವರ್ಷದ ವ್ಯಕ್ತಿ, ಬಳ್ಳಾರಿಯಲ್ಲಿ 56,58,58 ವರ್ಷದ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Share

Leave a Comment