ರಾಜ್ಯದಲ್ಲಿ 130 ಹೊಸ ಕೋವಿಡ್ ಪ್ರಕರಣ, ಸೋಂಕಿತರ ಸಂಖ್ಯೆ 2089ಕ್ಕೇರಿಕೆ

ಬೆಂಗಳೂರು, ಮೇ 24- ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 130 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2089ಕ್ಕೇರಿಕೆಯಾಗಿದೆ.
ಮಂಡ್ಯದಲ್ಲಿ 15, ಕಲಬುರಗಿಯಲ್ಲಿ 6, ಚಿಕ್ಕಬಳ್ಳಾಪುರದಲ್ಲಿ 27, ದಾವಣಗೆರೆಯಲ್ಲಿ 4, ಯಾದಗಿರಿಯಲ್ಲಿ 24, ಹಾಸನದಲ್ಲಿ 14, ಬೀದರ್ ನಲ್ಲಿ 6, ಉಡುಪಿಯಲ್ಲಿ 23, ವಿಜಯಪುರದಲ್ಲಿ 1, ಉತ್ತರ ಕನ್ನಡದಲ್ಲಿ 2, ದಕ್ಷಿಣ ಕನ್ನಡದಲ್ಲಿ 1, ಧಾರವಾಡದಲ್ಲಿ 1, ಶಿವಮೊಗ್ಗದಲ್ಲಿ 2, ತುಮಕೂರಿನಲ್ಲಿ 2, ಕೊಡಗಿನಲ್ಲಿ ಒಂದು ಪ್ರಕರಣ ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಕೇವಲ ಒಂದು ಪ್ರಕರಣ ಪತ್ತೆಯಾಗಿದೆ.
ಇವರಲ್ಲಿ 105 ಜನರು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಶಿವಮೊಗ್ಗದ ಓರ್ವರು ರಾಜಸ್ತಾನದಿಂದ ಹಿಂದಿರುಗಿರುವ ಇತಿಹಾಸ ಹೊಂದಿರುವುದನ್ನು ಹೊರತುಪಡಿಸಿದರೆ ಇತರರೆಲ್ಲರೂ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ.
ಭಾನುವಾರ ಒಂದೇ ದಿನ 46 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರಿಂದ ಇಲ್ಲಿಯವರೆಗೆ 654 ಜನರು ಚೇತರಿಕೆ ಕಂಡಂತಾಗಿದೆ. ಸದ್ಯ ರಾಜ್ಯದಲ್ಲಿ 1391 ಸಕ್ರಿಯ ಪ್ರಕರಣಗಳಿದ್ದು, 44 ಜನರು ಮೃತಪಟ್ಟಿದ್ದಾರೆ. 17 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
226 ಸಕ್ರಿಯ ಪ್ರಕರಣಗಳೊಂದಿಗೆ ಮಂಡ್ಯ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ನಗರ 127 ಪ್ರಕರಣಗಳೊಂದಿಗೆ ಎರಡನೇ ಹಾಗೂ ಯಾದಗಿರಿ 111 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಚಿಕ್ಕಬಳ್ಳಾಪುರ, ಹಾಸನ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ

Share

Leave a Comment