ರಾಜ್ಯದಲ್ಲಿ ಕಠಿಣ ನಿಯಮ ಲಾಕ್ ಡೌನ್ ಗೊಂದಲಕ್ಕೆ ಸಚಿವ ಅಶೋಕ್ ತೆರೆ

 
ಹಾಸನ.ಜೂ.30- ಮುಂದಿನ ದಿನ ರಾಜ್ಯದಲ್ಲಿ ನಿಯಮ ಕಠಿಣವಾಗಲಿದೆ ಹೊರತು ಲಾಕ್ಡೌನ್ ಮಾಡುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ನಗರದ ಹೃದಯ ಭಾಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಹಳೆಯ ಕಟ್ಟಡದ ಹಿಂಭಾಗದಲ್ಲಿ ಜಿಲ್ಲೆ ಸಾಂಸ್ಕೃತಿಕ ಹಿನ್ನೆಲೆ ಪ್ರತಿಬಿಂಬಿಸುವ ಜಿಲ್ಲಾ ಕಟ್ಟಡಕ್ಕೆ ಹಾಗೂ ನೂತನ ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಹಾಗು ಪಿಂಚಣಿ ಹಣ ಪಾವತಿ ಸರಳೀಕರಣಕ್ಕೆ ಒತ್ತು ,ಬ್ಯಾಂಕ್ ಗಳ‌ ಮೂಲಕ ವಿಧವಾ, ವೃದ್ಧಾಪ್ಯ ಹಾಗೂ ಇತರೆ ಮಾಸಿಕ ವೇತನ ಫಲಾನುಭವಿಗಳಿಗೆ ಪಾವತಿಯಾಗುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ರೆಸಾರ್ಟ್ ಮುಚ್ಚಲು ವಾರದ ಗಡುವು ನೀಡಲಾಗಿದೆ. ವಾರದ ನಂತರ ಮುಂದಿನ ಆದೇಶದ ವರೆಗೆ ರೆಸಾರ್ಟ್ ಹೋಂ ಸ್ಟೇ ಮುಚ್ಚುವಂತೆ ಆದೇಶ ನೀಡಲು ಜಿಲ್ಲಾಧಿಕಾರಿ ಗೆ ಅಶೋಕ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ.ಜನರೂ ಕೂಡ ಸರ್ಕಾರದ ಜೊತೆ ಕೈ ಜೊಡಿಸಿ ನಿಯಮ ಪಾಲನೆ ಮಾಡುವ ಮೂಲಕ ಸೊಂಕು ಹರಡದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Share

Leave a Comment