ರಾಜ್ಯದಲ್ಲಿ ಒಂದೇ ದಿನ 12.229 ಜನರ ಕೋವಿಡ್ ಪರೀಕ್ಷೆ; ಸುರೇಶ್ ಕುಮಾರ್ ಮಾಹಿತಿ

ಬೆಂಗಳೂರು,ಮೇ 22 -ರಾಜ್ಯದಲ್ಲಿ ಒಂದೇ ದಿನ 12,229 ಜನರ ಗಂಟಲ ದ್ರವವನ್ನು ಕೋವಿಡ್ -19 ಪರೀಕ್ಷೆಗೊಳಪಡಿಸಲಾಗಿದೆ. ಇದು ಇಲ್ಲಿಯವರೆಗೆ ಒಂದೇ ದಿನದಲ್ಲಿ ನಡೆಸಿದ ಅತಿ ಹೆಚ್ಚು ತಪಾಸಣೆ ಎಂದಿದ್ದಾರೆ.

ಕೋವಿಡ್- 19 ಕುರಿತ ವಿಡಿಯೋ ಕಾನ್ಫರೆನ್ಸ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ತಿಂಗಳಾಂತ್ಯಕ್ಕೆ ದಿನವೊಂದಕ್ಕೆ 10 ಸಾವಿರ ಜನರ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೆವು. ಆದರೆ, ಅದಕ್ಕೆ ಮುನ್ನವೇ ಈ ಗುರಿ ತಲುಪಿದ್ದೇವೆ ಎಂದರು.

ಮಾ. 25ರಿಂದ ಇದುವರೆಗೆ 1.86 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 1578 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 763 ವ್ಯಕ್ತಿಗಳಿಗೆ ಸಂಪರ್ಕದ ಮೂಲಕ ಸೋಂಕು ತಗುಲಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯಸೇತು ಆ್ಯಪ್ ಅನ್ನು ಇಲ್ಲಿಯವರೆಗೆ ಒಟ್ಟು 63,53, 248 ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೆ ಬೆಂಗಳೂರಿಗೆ 8 ವಿಮಾನಗಳಲ್ಲಿ 1035 ಪ್ರಯಾಣಿಕರು ಬಂದಿದ್ದು, ಎಲ್ಲರ ಗಂಟಲ ದ್ರವಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಇವರಲ್ಲಿ ಓರ್ವರಿಗೆ ಪಾಸಿಟೀವ್ ಬಂದಿದ್ದು, 335 ಜನರ ಪ್ರಾಥಮಿಕ ಸಂಪರ್ಕ ಕಂಡುಬಂದಿದೆ ಎಂದರು.

ಲಾಕ್ ಡೌನ್ ಸಡಿಲಿಕೆ ನಂತರ ಭಾರತಕ್ಕೆ ವಿದೇಶಗಳಿಂದ ಆಗಮಿಸಿರುವ 355 ಜನರು ಪಂಚತಾರಾ ಹೋಟೆಲ್, 450 ಮಂದಿ ಮೂರು ತಾರಾ ಹೋಟೆಲ್ 156 ಜನರು ಬಜೆಟ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. 58 ಜನರನ್ನು ಮನೆಗೆ ಕಳುಹಿಸಲಾಗಿದೆ. ಎಂದು ಮಾಹಿತಿ ನೀಡಿದ್ದಾರೆ.

ಮಂಡ್ಯ ಜಿಲ್ಲೆಗೆ ಇಲ್ಲಿಯವರೆಗೆ ಹೊರರಾಜ್ಯಗಳಿಂದ 1366 ಜನರು ಆಗಮಿಸಿದ್ದಾರೆ ಅವರ ಪೈಕಿ 836 ಜನರ ಪರೀಕ್ಷಾ ವರದಿ ಬಂದಿದೆ. 176 ಪಾಸಿಟಿವ್ ಇದ್ದಾರೆ. ಇಲ್ಲಿಯವರೆಗೆ ಒಟ್ಟು 9063 ಜನರಿಗೆ ಪರೀಕ್ಷೆ ಮಾಡಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ 247 ಜನರು ಮುಂಬೈಯಿಂದ ಬಂದಿದ್ದಾರೆ ಈ ಪೈಕಿ 108 ಜನರ ಪರೀಕ್ಷಾ ವರದಿ ಬಂದಿದ್ದು 47 ಜನ ಪಾಸಿಟೀವ್ ಕಂಡುಬಂದಿದ್ದಾರೆ ಎಂದರು.

Leave a Comment