ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಕಬ್ಬು ಉತ್ಪಾದನೆ ಮೇಲೆ ಪರಿಣಾಮ: ಸಚಿವ ಸಿ ಟಿ ರವಿ

 ಬೆಂಗಳೂರು, ಅ 18 – 22 ಜಿಲ್ಲೆಗಳಲ್ಲಿ ಇತ್ತೀಚಿನ ಪ್ರವಾಹವು ದೇಶದ ಮೂರನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಜ್ಯವೆನಿಸಿದ ಕರ್ನಾಟಕದಲ್ಲಿ ಕಬ್ಬಿನ ಇಳುವರಿ ಪರಿಣಾಮ ಬೀರಲಿದೆ ಎಂದು ಸಕ್ಕರೆ ಸಚಿವ ಸಿ ಟಿ ರವಿ ಶುಕ್ರವಾರ ಹೇಳಿದ್ದಾರೆ.

  ಗುರುವಾರ ಸಕ್ಕರೆ ನಿಯಂತ್ರಣ ಮಂಡಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಈ ಪೈಕಿ 1.52 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ಪ್ರವಾಹಕ್ಕೆ ತುತ್ತಾಗಿದೆ ಎಂದು ಹೇಳಿದರು.

  ಪ್ರವಾಹದಿಂದ ಬೆಳೆ ಹಾನಿಯಾಗಿರುವುದರಿಂದ ಕೊರತೆ ಉಂಟಾಗಬಹುದು ಎಂದು ಹೇಳಿದ ಅವರು, ದೀಪಾವಳಿ ಹಬ್ಬದ ನಂತರ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು.

 ರಾಜ್ಯದಲ್ಲಿ 85 ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ 67 ಸಕ್ರಿಯವಾಗಿವೆ ಎಂದ ಸಚಿವರು, 2018-19ರಲ್ಲಿ ಕಾರ್ಖಾನೆಗಳಿಂದ ಒಟ್ಟು 410.65 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರಿಯಲಾಗಿದ್ದು,  ಸಕ್ಕರೆ ಉತ್ಪಾದನೆ 44.31 ಲಕ್ಷ ಮೆಟ್ರಿಕ್ ಟನ್ ಆಗಿತ್ತು” ಎಂದು ಹೇಳಿದರು.

  ದೇಶೀಯವಾಗಿ, ಸಕ್ಕರೆ ಬೇಡಿಕೆ 25 ದಶಲಕ್ಷ ಮೆಟ್ರಿಕ್ ಟನ್ (ಎಂಎಂಟಿ)ನಷ್ಟಿದ್ದರೆ, ಉತ್ಪಾದನೆ 28 ಎಂಎಂಟಿಯಾಗಿದೆ. ಜಾಗತಿಕವಾಗಿ  270 ಎಂಎಂಟಿ ಕಬ್ಬು ಉತ್ಪಾದನೆಯಾಗುತ್ತಿದ್ದು, ಬೇಡಿಕೆ 300 ಎಂಎಂಟಿ ನಷ್ಟಿದೆ. ಇದಕ್ಕೆ ಕಾರಣ ಬ್ರೆಜಿಲ್ ಎಥೆನಾಲ್‍ಗೆ ಆದ್ಯತೆ ನೀಡುತ್ತಿದ್ದು, ಕಬ್ಬು ಬೆಳೆಯುವುದರ ಮೇಲೆ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದಲೇ, ಭಾರತ ಪ್ರಥಮ ಸ್ಥಾನ ತಲುಪಿದೆ. ದೇಶದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನ, ಮಹಾರಾಷ್ಟ್ರ ಮತ್ತು ಕರ್ನಾಟಕ ನಂತರ ಸ್ಥಾನಗಳಲ್ಲಿವೆ ಎಂದು ಅವರು ಹೇಳಿದ್ದಾರೆ.

  ನ್ಯಾಯಯುತ ಮತ್ತು ಲಾಭಯದಾಯಕ್ಕೆ ದರಕ್ಕೆ (ಎಫ್‌ಆರ್‌ಪಿ) ಅನುಗುಣವಾಗಿ ಕಾರ್ಖಾನೆಗಳು ಮುಂದಿನ 10 ದಿನಗಳಲ್ಲಿ ತಮ್ಮ ಬಾಕಿ ಪಾವತಿಸುವಂತೆ ಸರ್ಕಾರ ಕ್ರಮ ವಹಿಸಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಬ್ಬು ಬೆಳೆಗಾರರಿಗೆ ಸಚಿವರು ಭರವಸೆ ನೀಡಿದರು. 2018-19ನೇ ಸಾಲಿಗೆ ಅನ್ವಯಿಸುವಂತೆ ಎಫ್‌ಆರ್‌ಪಿ ಪ್ರತಿ ಟನ್‌ಗೆ 2,750 ರೂ.ನಷ್ಟಿದೆ.

 ‘ಎಫ್‌ಆರ್‌ಪಿ ದರದಂತೆ ಕಾರ್ಖಾನೆಗಳು ರೈತರಿಗೆ 11,948 ಕೋಟಿ ರೂ. ಪಾವತಿಸಬೇಕು. ಇಲ್ಲಿಯವರೆಗೆ ಕೇವಲ 84 ಕೋಟಿ ರೂ. ಮಾತ್ರ ಬಾಕಿ ಇದೆ” ಎಂದು ಸಿ ಟಿ ರವಿ ಹೇಳಿದರು.

Leave a Comment