ರಾಜ್ಯಗಳಲ್ಲಿ ಅಗತ್ಯ ಸೇವೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ- ರಾಜನಾಥ್ ಸಿಂಗ್

ನವದೆಹಲಿ : ದೇಶಾದ್ಯಂತ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಏ.14ರವರೆಗೆ ಲಾಕ್ ಡೌನ್ ಘೋಷಿಸಿದ್ದು, ಆ ಬಳಿಕವೂ ಲಾಕ್ ಡೌನ್ ಮುಂದುವರೆಸಬೇಕಾ ಅಥವಾ ತೆರವುಗೊಳಿಸಬೇಕಾ ಎಂಬ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಈ ವೇಳೆ, ರಾಜ್ಯಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ರಾಜನಾಥ್ ಸಿಂಗ್ ಸಚಿವರಿಗೆ ಸೂಚನೆ ನೀಡಿದ್ದಾರೆ.

ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಸಚಿವರ ಸಭೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್, ನರೇಂದ್ರ ಸಿಂಗ್ ಥೋಮರ್, ಸ್ಮೃತಿ ಇರಾನಿ, ಸದಾನಂದಗೌಡ ಸೇರಿದಂತೆ ಪ್ರಮುಖ ಸಚಿವರು ಪಾಲ್ಗೊಂಡರು. ಮಹತ್ವದ ಸಭೆಯಲ್ಲಿ ಒಂದು ವೇಳೆ, ಏ.14ರ ಬಳಿಕ ಲಾಕ್ ಡೌನ್ ತೆರವು ಗೊಳಿಸಿದರೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಚರ್ಚೆ ನಡೆಯಿತು. ಇನ್ನು ಪರಿಸ್ಥಿತಿ ನಿಭಾಯಿಸುವ ಬಗ್ಗೆ ಬ್ಲೂಪ್ರಿಂಟ್ ಕೂಡ ರಚನೆಯಾಗಿದ್ದು, ಈ ಬಗ್ಗೆ ಇನ್ನು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಪ್ರಧಾನಿ ಮೋದಿ ಅವರೊಂದಿಗೆಈ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಇದರೊಂದಿಗೆ ಸಭೆಯಲ್ಲಿ ಲಾಕ್ ಡೌನ್ ತೆರವು ಹಿನ್ನೆಲೆಯಲ್ಲಿ ನಾಲ್ಕು ಕ್ಯಾಟಗರಿಯನ್ನು ರಚನೆ ಮಾಡಿರುವ ಕುರಿತಂತೆಯೂ ಚರ್ಚಿಸಲಾಯಿತು. ಈ ಪೈಕಿ ಕಡಿಮೆ ರಿಸ್ಕ್ ಇರುವ ಪ್ರದೇಶ, ಹೆಚ್ಚು ರಿಸ್ಕ್ ಇರುವ ಪ್ರದೇಶ, ಕಳೆದ 7 ದಿನಗಳಿಂದ ಹೆಚ್ಚು ಸೋಂಕು ಪತ್ತೆಯಾಗಿರುವ ಪ್ರದೇಶ ಹಾಗೂ ಶೇ.50ಕ್ಕಿಂತ ಹೆಚ್ಚು ರಿಸ್ಕ್ ಇರುವ ಪ್ರದೇಶ ಎಂದು ನಾಲ್ಕು ಕ್ಯಾಟಗರಿಯನ್ನು ಮಾಡಲಾಗಿದ್ದು, ಇದೆಲ್ಲವನ್ನು ಮಾನಿಟರ್ ಮಾಡಲಾಯಿತು.

Leave a Comment