ರಾಜು ಜೇಮ್ಸ್ ಬಾಂಡ್

ಚಿಕ್ಕನೆಟಕುಂಟೆ ಜಿ.ರಮೇಶ್

ಫಸ್ಟ್ ರ್‍ಯಾಂಕ್ ರಾಜು’, ’ರಾಜು ಕನ್ನಡ ಮೀಡಿಯಂ’,ಇದೀಗ ’ರಾಜು ಜೇಮ್ಸ್ ಬಾಂಡ್, ಸದ್ಯಕ್ಕಂತೂ ನಟ ಗುರುನಂದನ್, ರಾಜುನನ್ನು ಬಿಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜೇಮ್ಸ್ ಬಾಂಡ್ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.

ಗುರುನಂದನ್ ಜೇಮ್ಸ್ ಬಾಂಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಜು ಜೇಮ್ಸ್ ಬಾಂಡ್ ಚಿತ್ರ ಸೆಟ್ಟೇರಿದ್ದು ಮುಂದಿನ ತಿಂಗಳಿನಿಂದ ಚಿತ್ರ ಆರಂಭಗೊಳ್ಳಲಿದೆ.ಕನ್ನಡದಲ್ಲಿ ಬಹಳ ದಿನಗಳ ನಂತರ ಬಾಂಡ್ ಸಿನಿಮಾ ಚಿತ್ರೀಕರಣವಾಗುತ್ತಿದೆ.

raju-james-bond_109

ದೀಪಕ್ ಮಧುವನಹಳ್ಳಿ ’ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಆಕ್ಷನ್‌ಕಟ್ ಹೇಳಲು ಮುಂದಾಗಿದ್ದಾರೆ. ಈ ಮುಂಚೆ ’ಭಾಗ್ಯರಾಜು’ ಮತ್ತು ’ಕಳ್ಬೆಟ್ಟದ ದರೋಡೆಕೋರರು’ ಚಿತ್ರ ನಿರ್ದೇಶಿಸಿದ್ದ ದೀಪಕ್‌ಗೆ ಇದು ಮೂರನೇ ಚಿತ್ರ. ಚಿತ್ರಕ್ಕೆ ಇದೇ ಮೊದಲ ಬಾರಿಗೆ ಕಿರಣ್ ಬರತೂರ್ ಮತ್ತು ಮಂಜುನಾಥ್ ವಿಶ್ವಕರ್ಮ ಬಂಡವಾಳ ಹಾಕಿದ್ದಾರೆ. ಈ ಇಬ್ಬರೂ ವಿದೇಶದಲ್ಲಿದ್ದಾರೆ. ಇವರಿಗೆ ಮೊದಲ ನಿರ್ಮಾಣದ ಚಿತ್ರ. ಕಳೆದ ವಾರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ’ರಾಜು ಜೇಮ್ಸ್ ಬಾಂಡ್ ಚಿತ್ರದ ಮಹೂರ್ತವಿತ್ತು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್. ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೌಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಮಹೇಶ್ ಸೇರಿದಂತೆ ಅನೇಕರು ಪಾಲ್ಗೊಂಡು ಚಿತ್ರಕ್ಕೆ ಮತ್ತು ತಂಡಕ್ಕೆ ಶುಭುಕೋರಿದರು.

raju-james-bond_136

ಈ ವೇಳೆ ನಿರ್ದೇಶಕ ದೀಪಕ್ ಮಧುವನಹಳ್ಳಿ,, ಪಂಜಾಬ್‌ನಲ್ಲಿ ನಡೆದ ಬ್ಯಾಂಕ್ ದರೋಡೆಯ ಕತೆಯಲ್ಲ ಎಂದು ಮೊದಲಿಗೆ ಸ್ಪಷ್ಟಪಡಿಸಿದರು. ಸಣ್ಣ ನಗರದಲ್ಲಿ ನಡೆಯುವ ಘಟನೆಯನ್ನಾಧರಿಸಿ ಚಿತ್ರ ಮಾಡಲಾಗುತ್ತಿದೆ.ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ರಾಜು ಜೇಮ್ಸ್ ಬಾಂಡ್ ಆಗಿ ಎದುರಿಸುತ್ತಾನಾ ಇಲ್ಲವೇ ಸಾಮಾನ್ಯ ರಾಜುವಾಗಿ ಎದುರಿಸುತ್ತಾನಾ ಎನ್ನುವ ಹಿನ್ನೆಲೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಚಿತ್ರದ ಚಿತ್ರೀಕರಣ ಮಾಡುವ ಉದ್ದೇಶವಿದೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ನಡೆಯಲಿದೆ ಎಂದು ಹೇಳಿಕೊಂಡರು. ನಟ ಗುರುನಂದನ್, ಚಿತ್ರವನ್ನು ಸಂಡೂರ್, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗುವುದು. ಒಳ್ಳೆಯ ಕತೆ ಇದೆ.ಎಲ್ಲರಿಗೂ ಇಷ್ಟವಾಗಲಿದೆ ಎಂದರೆ ನಟಿ ಮೃದುಲಾ,ಪಾತ್ರದಲ್ಲಿ ಕಾಣಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದರು.

ನಿರ್ಮಾಪಕರಾದ ಕಿರಣ್ ಮತ್ತು ಮಂಜುನಾಥ್, ವಿದೇಶದಲ್ಲಿದ್ದರೂ ಕನ್ನಡ ಚಿತ್ರದ ಮೇಲಿನ ಅಭಿಮಾನದಿಂದ ಮೊದಲ ಭಾರಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚಿತ್ರ ನಿರ್ಮಾಣ ಮಾಡುವ ಉದ್ದೇಶವಿದೆ. ಚಿತ್ರಕ್ಕೆ ಮತ್ತು ತಂಡಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು. ಅನೂಪ್ ಸೀಳಿನ್ ಸಂಗೀತ, ಮನೋಹರ್ ಜೋಶಿ ಛಾಯಾಗ್ರಾಹಣ ಚಿತ್ರಕ್ಕಿದೆ.

Leave a Comment