ರಾಜೀವ್ ಗಾಂಧಿ ದೇಶದ ಕಂಪ್ಯೂಟರ್ ಕ್ರಾಂತಿಯ ಪಿತಾಮಹ:ಅಜಿತ್ ಪವಾರ್

ಔರಂಗಾಬಾದ್‍, ಮುಂಬೈ – ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ದೇಶದ ಕಂಪ್ಯೂಟರ್ ಕ್ರಾಂತಿಯ ಪಿತಾಮಹ ಮತ್ತು ಇಂದಿನ ಡಿಜಿಟಲ್ ಇಂಡಿಯಾ ಅವರು ಹಾಕಿದ ಅಡಿಪಾಯದ ಮೇಲೆ ದೃಢವಾಗಿ ನಿಂತಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದ್ದಾರೆ.

ಹಿರಿಯ ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಸೋದರಳಿಯನೂ ಆಗಿರುವ ಅಜಿತ್ ಪವಾರ್, ಅವರು 29 ನೇ ಪುಣ್ಯತಿಥಿಯಂದು ದಿವಂಗತ ರಾಜೀವ್ ಗಾಂಧಿ ಅವರನ್ನು ಸ್ಮರಿಸಿ ಶ್ಲಾಘಿಸಿದ್ದಾರೆ.
ರಾಜೀವ್ ಅವರ ದೂರದೃಷ್ಟಿಯಿಂದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿ ಸಾಧ್ಯವಾಗಿದೆ.
“ದೇಶದಲ್ಲಿ ಕಂಪ್ಯೂಟರ್ ಯುಗವನ್ನು ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದು ಉದ್ಗರಿಸಿದ್ದಾರೆ.
“ಇಂದು, ಕರೋನಾ ಬಿಕ್ಕಟ್ಟಿನಲ್ಲಿ ಅನೇಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸುತ್ತಿದ್ದಾರೆ. ಈ ಹಿಂಎ ರಾಜೀವ್ ಗಾಂಧಿ ತೆಗೆದುಕೊಂಡ ನಿರ್ಧಾರಗಳಿಂದ ಇದು ಸಾಧ್ಯವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುವ ಪ್ರಧಾನಿಯಾಗಿ, ರಾಜೀವ್ ಯುವಕರ ಹಿತಾಸಕ್ತಿಯನ್ನು ಪರಿಗಣಿಸಿದರು ಮತ್ತು ಅವರಿಗಾಗಿ ಅನೇಕ ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಂಡರು .”ಅವರು 18 ವರ್ಷ ಪೂರೈಸಿದ ಯುವಕರಿಗೆ ಮತದಾನದ ಹಕ್ಕನ್ನು ಸಹ ನೀಡಿ, ದೇಶದ ಪ್ರಗತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರಿಗೆ ಅವಕಾಶವನ್ನು ಒದಗಿಸಿದ್ದಾರೆ” ಎಂದು ಅಜಿತ್ ಪವಾರ್ ಪ್ರತಿಕ್ರಿಯಿಸಿದ್ದಾರೆ.

ರಾಜೀವ್ ಗಾಂಧಿಯವರ ಪುಣ್ಯತಿಥಿಯನ್ನು ‘ಭಯೋತ್ಪಾದನಾ-ವಿರೋಧಿ ಮತ್ತು ಹಿಂಸಾಚಾರ ವಿರೋಧಿ ದಿನ’ ಎಂದು ಆಚರಿಸುತ್ತಿದ್ದು, ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ಕೊನೆಗೊಳಿಸಲು ಉಪಮುಖ್ಯಮಂತ್ರಿ ಅಜಿತ್ ಪವಾರ್ ಮನವಿ ಮಾಡಿದ್ದಾರೆ

Leave a Comment