ರಾಜಸ್ಥಾನದಲ್ಲಿ ಪೆಟ್ರೋಲ್-ಡಿಸೇಲ್ ದರ ಇಳಿಕೆ?

ಜೈಪುರ, ಸೆ ೧೦- ಇಂಧನ ದರ ಏರಿಕೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಬಂದ್ ಆಚರಿಸುತ್ತಿವೆ. ಇದೇ ಹೊತ್ತಿನಲ್ಲಿ ರಾಜಸ್ಥಾನ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಇಳಿಸಿ ಮಹತ್ವದ ಹೆಜ್ಜೆ ಇಟ್ಟಿದೆ.

ರಾಜಸ್ಥಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ.೪ ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ಪ್ರತಿ ಲೀಟರ್ ಮೇಲೆ ೨.೫೦ ರೂ. ಇಳಿಕೆಯಾಗಲಿದೆ. ಈ ತೀರ್ಮಾನದಿಂದ ಆ ಸರ್ಕಾರದ ಆದಾಯದ ಮೇಲೆ ೨ ಸಾವಿರ ಕೋಟಿ ರೂ. ಹೊರೆ ಬೀಳಲಿದೆ.

ಮೂರು ದಿನಗಳ ಹಿಂದೆ ಇಂಧನ ದರ ಇಳಿಕೆ ಕುರಿತು ರಾಜ್ಯದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಆರಂಭವಾಗಿತ್ತು. ತೆರಿಗೆ ಇಳಿಸಿದರೆ ಎಷ್ಟು ಪ್ರಮಾಣದಲ್ಲಿ ಇಳಿಸಬೇಕು? ತೆರಿಗೆ ಇಳಿಸಿದರೆ ಏನು ಅಡ್ಡ ಪರಿಣಾಮವಾಗಬಹುದು? ಲಾಭವೇನು- ನಷ್ಟವೇನು ಎಂಬ ಚರ್ಚೆ ನಡೆದಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ಆದರೆ, ತೆರಿಗೆ ಇಳಿಸುವುದರಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಮೇಲೆ ಹೊಡೆತ ಬೀಳಬಹುದು, ಒಂದೊಮ್ಮೆ ಬೆಲೆ ಇಳಿಕೆಯಾದರೆ ಭವಿಷ್ಯದಲ್ಲಿ ಸರಕಾರದ ಆದಾಯ ಖೋತಾ ಅಗಲಿದೆ. ಈ ಕಾರಣಕ್ಕೆ ತೆರಿಗೆ ಇಳಿಸದೇ ಇರಲು ನಿರ್ಧರಿಸಲಾಯಿತ್ತು ಎಂದು  ತಿಳಿದುಬಂದಿದೆ. ಪ್ರಮುಖವಾಗಿ ತೆರಿಗೆ ಇಳಿಸಿದರೆ ರಾಜಕೀಯ ಲಾಭ ಅಷ್ಟಕ್ಕಷ್ಟೆ ಎಂಬ ಅಂದಾಜಿನ ಮೇಲೆ ತೆರಿಗೆ ಇಳಿಸದಿರಲು ನಿರ್ಧರಿಸಲಾಯಿತೆಂದು ತಿಳಿದು ಬಂದಿದೆ.

Leave a Comment