ರಾಜಕುಮಾರನಿಗೆ ಮಳೆಯ ಸಿಂಚನ

ಅಶೋಕ ಹೊಟೇಲ್ ಆವರಣ ಹುಲ್ಲು ಹಾಸಿನ ಮೇಲೆ ಹಾಕಲಾಗಿದ್ದ ವೇದಿಕೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ರಾಜಕುಮಾರ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇನ್ನೇನು ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ವರ್ಷದ ಮೊದಲ ಮಳೆ ಸುರಿಯಿತು.ಮಳೆಯಲ್ಲಿಯೇ ಹಾಡಿನ ಸಿಡಿಯನ್ನು  ಶಿವರಾಜ್‌ಕುಮಾರ್,ರಾಘವೇಂದ್ರ ರಾಜ್‌ಕುಮಾರ್ ಬಿಡುಗಡೆಗೊಳಿಸಿದರು.

ಹಾಡುಗಳ ಬಿಡುಗಡೆ ವೇಳೆ  ವರ್ಷದ ಮೊದಲ ವರ್ಷಧಾರೆ ಸುರಿದು ಭೂಮಿ ತಂಪಾಗಿಸಿದೆ ಅದೇ ರೀತಿ ಪ್ರೇಕ್ಷರನ್ನು ತಂಪಾಗಿಸಿ ಚಿತ್ರ ಗೆಲ್ಲಲಿದೆ ಎನ್ನುವ ಮಾತುಗಳು ಕಾರ್ಯಕ್ರಮದಲ್ಲಿ ಸೇರಿದ್ದ ಚಿತ್ರರಂಗದ ಗಣ್ಯರಿಂದ ವ್ಯಕ್ತವಾದವು.

ಜೋರು ಮಳೆ ಬಂದ ಕಾರಣ  ಸಿನಿಮಾ ಗೆಲ್ಲುತ್ತದೆಂದು ಭವಿಷ್ಯ ನುಡಿದ ಜಗ್ಗೇಶ್,ನಾನೇದರೂ ನಾಯಕಿಯಾಗಿದ್ದರೆ ಅಣ್ಣಾವ್ರರನ್ನು ಕ್ಯಾಚ್ ಹಾಕಿಕೊಳ್ಳುತ್ತಿದ್ದೆ. ರಾಜ್‌ರನ್ನು ಭೇಟಿ ಮಾಡಿದ ಸಂದರ್ಭವನ್ನು ಮೆಲುಕು ಹಾಕಿ, ಶಿವ ಪಾರ್ವತಿಯ ಸಣ್ಣಕತೆಯನ್ನು ಹೇಳಿ, ವಿರಾಮದಲ್ಲಿ ಬರುವ ಪುನೀತ್ ನಡೆ ನಿಜವಾಗಲೂ ಅಣ್ಣಾವ್ರು ನಡೆದುಬಂದಂತೆ ಆಗುತ್ತದೆ ಎಂದು ನೆರದಿದ್ದವರನ್ನು ನಗಿಸಿದರು.

ಮದುವೆ ಬಳಿಕ ಮೊದಲಬಾರಿ ಪತ್ನಿ ಸಮೇತ ಆಗಿಮಿಸಿದ್ದ ಯಶ್ ಮಾತನಾಡಿ ಚಿತ್ರದ ಹೆಸರಿನ  ಶಕ್ತಿ ನಾಡಿಗೆ ಸಂಬಂದಿಸಿದ್ದಾಗಿದೆ ಇಂತಹ ಶೀರ್ಷಿಕೆಗೆ ಕತೆ ಮಾಡುವುದು ಕಷ್ಟ. ಆ ತರಹದ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ಇಂತಹ ಚಿತ್ರಕ್ಕೆ ಪುನೀತ್ ಉತ್ತಮ ಆಯ್ಕೆ ಎಂದು ಹೊಗಳಿದರು.

ಇದೊಂದು ಕುಟುಂಬದ ಸಮಾರಂಭ ಎನ್ನಬಹುದು. ಪುನೀತ್, ನಿರ್ದೇಶಕರು, ನಿರ್ಮಾಪಕರು ಪರಿಚಯದವರು. ಇವರ ನಿರ್ಮಾಣದಲ್ಲಿ ನಟಿಸುವ ಆಸೆ ಇದೆ ಎಂದು ರಾಧಿಕಾಪಂಡಿತ್ ಹೇಳಿದರೆ, ಪುನೀತ್ ಅಭಿಮಾನಿಯಾಗಿ ಸಿನಿಮಾ ನೋಡಲು ಕಾತುರನಾಗಿದ್ದೇನೆ ಎಂದರು ರಾಘವೇಂದ್ರರಾಜ್‌ಕುಮಾರ್.

ನಾನು ನಟನೆ ಮಾಡಲು ಪ್ರೇರಣೆ ಪುನೀತ್ ಎಂದ ಶಿವರಾಜ್‌ಕುಮಾರ್, ಅವನು ಎಂದೂ ಅತಿರೇಕದ ನಟನೆ ಮಾಡಿಲ್ಲ. ಸರಳವಾಗಿ ಅಭಿನಯಿಸುತ್ತಾನೆ. ಅಪ್ಪು ಟೈಟಲ್, ಪವರ್‌ಸ್ಟಾರ್ ಬಿರುದನ್ನು ನೀಡಿದ್ದೆ. ವರ್ಷಕ್ಕೆ ನಾಲ್ಕು ಸಿನಿಮಾಗಳನ್ನು  ನಾನು ಮಾಡುತ್ತೇನೆ ಆದರೆ ಎರಡೆ ಸಿನಿಮಾ ಮಾಡಿದರೂ ಪುನೀತ್ ಹಿಟ್ ಕೊಡುತ್ತಾನೆ. ಟ್ರೈಲರ್ ನೋಡಿದಾಗ ಅಪ್ಪಾಜಿ ಕಾಣುತ್ತಾರೆ ಎನ್ನುತ್ತಾರೆ.

ರಾಜಕುಮಾರ್ ಅವರಿಗೂ ಚಿತ್ರಕ್ಕೂ ಯಾವುದೇ ಸಂಬಂದವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ ನಿರ್ದೇಶಕ ಸಂತೋಷ್‌ಆನಂದ್‌ರಾಮ್, ಚಿತ್ರದಲ್ಲಿ ರಾಜ್ ಅವರ ಕೆಲವು ಗುಣ, ಮೌಲ್ಯಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪಾರಿವಾಳ ಗೊಂಬೆ ಬರುವುದು ಸನ್ನಿವೇಶಕ್ಕಾಗಿ ಮಾತ್ರ ಅದು ರಾಜ್‌ಕುಮಾರ್ ಹಾಗೂ ಕಸ್ತೂರಿ ನಿವಾಸ ಚಿತ್ರಕ್ಕೂ ಸಂಬಂಧಿಸಿದ್ದಲ್ಲ ಎನ್ನುತ್ತಾರೆ.ಮುಖ್ಯವಾಗಿ ಕುಟುಂಬದ ಸಂಬಂದಗಳು ಚಿತ್ರಕ್ಕೆ ಜೀವಾಳ. ಮೂರು ಹಾಡುಗಳನ್ನು ಬರೆಯಲಾಗಿದ್ದು, ಉಳಿದವನ್ನು ಯೋಗರಾಜಭಟ್,ಗೌಸ್‌ಪೀರ್ ರಚಿಸಿದ್ದಾರೆ.

ದೊಡ್ಡ ತಾರಬಳಗವನ್ನು ಕರೆದುಕೊಂಡು ಮಲೇಶಿಯಾ, ಆಸ್ಟ್ರೇಲಿಯಾ, ಗೋವಾ, ಕಾಶಿ, ಮೈಸೂರು ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಿತ್ರದ ಹೂರಣ ಬಿಚ್ಚಿಟ್ಟರು.ತಂದೆಯಾಗಿ ಕಾಣಿಸಿಕೊಂಡಿರುವ ಶರತ್‌ಕುಮಾರ್ ರಾಜಕುಮಾರ ಎಂದರೆ ಕರ್ನಾಟಕ, ಕರ್ನಾಟಕ ಅಂದರೆ ರಾಜಕುಮಾರ.ಇದರ ಮೇಲೆ ಅತಿಯಾದ ನಿರೀಕ್ಷೆ ಇದೆ ಎಂದು ಬಣ್ಣನೆ ಮಾಡಿದರು. ಕಲಾವಿದರ ಪಟ್ಟಿಯನ್ನು ಓದಿದ ಪುನೀತ್‌ರಾಜಕುಮಾರ್ ಅಪ್ಪಾಜಿ ಹೆಸರಿನ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ. ಫೈಟ್ ದೃಶದಲ್ಲಿ ಅನಿಲ್ ನಟಿಸಿದ್ದು, ಇಂದು ಅವರಿಲ್ಲದಿರುವುದು ಖೇದ. ತೆರೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ಕಾದುನೋಡಬೇಕಿದೆ ಎನ್ನುತ್ತಾರೆ.

ಆಡಿಸಿನೋಡು ಹಾಡನ್ನು ಸಿದ್ದಪಡಿಸಲು ಮೂರು ತಿಂಗಳು ಬೇಕಾಯಿತು. ವಿಜಯ್‌ಪ್ರಕಾಶ್ ಹಾಡಿಗೆ ಮೆರುಗು ತಂದಿದ್ದಾರೆ ಎಂಬ ಮಾತು ಸಂಗೀತ ನಿರ್ದೇಶಕ ಹರಿಕೃಷ್ಣ ಅವರದಾಗಿತ್ತು. ನಾಯಕಿ ಪ್ರಿಯಾಆನಂದ್, ಅವಿನಾಶ್, ರಂಗಾಯಣರಘು,ಶ್ರೀಧರ್ ನಿರ್ಮಾಪಕ ವಿಜಯ್‌ಕಿರಂದೂರು, ಸಾಹಸ ನಿರ್ದೇಶಕ ವಿಜಯ್, ಕಲಾ ನಿರ್ದೇಶಕ ಶಿವಕುಮಾರ್, ಛಾಯಗ್ರಾಹಕ ವೆಂಕಟ್ ಉಪಸ್ತಿತರಿದ್ದರು.

ರಾಜಕುಮಾರ ೨೪ರಂದು ರಾಜ್ಯಾದಂತ ತೆರೆಕಾಣುವ ಸಂಭವವಿದೆ.ರಾಜಕುಮಾರ’ ಚಿತ್ರದ ಟ್ರೇಲರ್ ನೋಡಿದವರಿಗೆ, ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ ಎಂಬುದು ತಿಳಿಯುತ್ತದೆ. ಆಸ್ಟ್ರೇಲಿಯಾ, ಮಲೇಷ್ಯಾ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದ್ದು, ಎರಡು ಶೇಡ್ನ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಪುನೀತ್ಗೆ ನಾಯಕಿಯಾಗಿ ಕಾಲಿವುಡ್‌ನ ಖ್ಯಾತ ನಟಿ ಪ್ರಿಯಾ ಆನಂದ್ ನಟಿಸಿದ್ದರೆ, ತಂದೆಯಾಗಿ ಶರತ್ಕುಮಾರ್ ಕಾಣಿಸಿಕೊಂಡಿದ್ದಾರೆ.

Leave a Comment