ರಾಜಕೀಯಕ್ಕೆ ಪಾದಾರ್ಪಣೆ ಮಾಡಲ್ವಂತೆ ಸೋನಾಕ್ಷಿ

ಮುಂಬೈ, ಜುಲೈ 27 – ಬಾಲಿವುಡ್ ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ, ರಾಜಕೀಯಕ್ಕೆ ಪಾದಾರ್ಪಣೆ ಮಾಡದಿರಲು ತೀರ್ಮಾನ ಕೈಗೊಂಡಿದ್ದಾರಂತೆ.

ಬಾಲಿವುಡ್ ನಟ ಹಾಗೂ ರಾಜಕೀಯ ದುರೀಣ ಶತೃಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ, ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ಒಂದು ದಶಕ ಗತಿಸಿದೆ.

ತಂದೆ ರಾಜಕಾರಣಿ ಆಗಿರುವುದರಿಂದ ಅನೇಕ ಬಾರಿ ಸೋನಾಕ್ಷಿ, ಮಾಧ್ಯಮದ ಕಣ್ಣಿಗೆ ಗುರಿಯಾಗುತ್ತಾರೆ.

ಈ ಕುರಿತು ಮಾತನಾಡಿದ ಸೋನಾಕ್ಷಿ, ”ಕುಟುಂಬದ ಸದಸ್ಯರು ರಾಜಕೀಯದಲ್ಲಿರುವುದರಿಂದ ನಮ್ಮ ತಂದೆಯ ಕೆಲಸ ಕಾರ್ಯದ ಕುರಿತಾಗಿ ಪ್ರಶ್ನಿಸಲಾಗುತ್ತದೆ. ಅಲ್ಲದೇ, ನನ್ನ ಬಗ್ಗೆಯೂ ತಂದೆಗೂ ಪ್ರಶ್ನಿಸಲಾಗುತ್ತದೆ. ಹೀಗಾಗಿ ಅನೇಕ ಬಾರಿ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ನಾನು ಸುದ್ದಿಯಾಗುತ್ತಾನೆ” ಎಂದು ತಿಳಿಸಿದ್ದಾರೆ.

ಪತ್ರಕರ್ತರೊಬ್ಬರು ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಇಚ್ಛೇ ಇದೆಯಾ ಎಂದು ಸೋನಾಕ್ಷಿಗೆ ಪ್ರಶ್ನಿಸಿದಾಗ, ”ಇಲ್ಲ. ಯಾವಾಗಲೂ ಇಲ್ಲ. ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಕುರಿತು ನಾನ್ಯಾವತ್ತು ಯೋಚಿಸುವುದಿಲ್ಲ. ರಾಜಕೀಯದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲ” ಎಂದಿದ್ದಾರೆ.

ಸದ್ಯ ‘ಖಾನದಾನಿ ಶಫಖಾನಾ’ ಚಿತ್ರ ಪ್ರಚಾರದಲ್ಲಿ ಸೋನಾಕ್ಷಿ ತೊಡಗಿದ್ದಾರೆ. ಈ ಚಿತ್ರದಲ್ಲಿ ಸೋನಾಕ್ಷಿ ಹೊರತಾಗಿ ನಟ ವರುಣ್ ಶರ್ಮಾ, ಅನ್ನು ಕಪೂರ್, ಬಾದ್ ಶಾ ಹಾಗೂ ಕುಲಭೂಷಣ್ ಕರಬಂಧಾದಂತಹ ಕಲಾವಿದರು ನಟಿಸಿದ್ದಾರೆ.

ಆಗಸ್ಟ್ 02ರಂದು ಚಿತ್ರ ಬಿಡುಗಡೆಗೊಳ್ಳಲಿದೆ.

Leave a Comment