ರಾಜಕಿಯ ಕೆಸರಾಟ ಖಂಡನೀಯ-ತೊರಗಲ್

ಹುಬ್ಬಳ್ಳಿ,ಏ 16- ರಾಷ್ಟ್ರೀಯ ಪಕ್ಷಗಳು ಒಬ್ಬರಿಗೊಬ್ಬರು ಕೆಸರ ಎರಚಾಟ, ಲಂಗು-ಲಗಾಮಿಲ್ಲದ ಅಪವಾದ, ಸ್ವಾರ್ಥ ಚಿಂತನೆ, ಅಧಿಕಾರದ ಲಾಲಸೆ, ಬೇಜವಾಬ್ದಾರಿಯುತ ಹೇಳಿಕೆಗಳಿಗೆ ರಾಜ್ಯದ ಜನತೆ ಭ್ರಮನಿರಸನಗೊಳ್ಳುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾ ಜಯಭಾರತ ಜನಸೇವಾ ಸಂಘದ ಅಧ್ಯಕ್ಷ ಐ.ಎಂ.ತೊರಗಲ್ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಗಳು ತಮ್ಮ ವ್ಯಕ್ತಿತ್ವದ ಬಗ್ಗೆ ಈ ಹಿಂದೆ ತಾವು ಮಾಡಿರುವ ಸಾಧನೆ, ಜನಸೇವೆ, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತೋರಿಸಿ ಮುಂದೆ ಇನ್ನು ಹೆಚ್ಚಿನ ಸೇವೆ ಮಾಡಲು ಅವಕಾಶ ಮಾಡಿಕೊಡಿರಿ ಎಂದು ಹೇಳುವ ಬದಲು ದೇಶದ ಪ್ರಧಾನಮಂತ್ರಿ, ರಾಜ್ಯದ ಮುಖ್ಯಮಂತ್ರಿ, ಕಾಶ್ಮೀರ ಪ್ರದೇಶದ ಸೇನೆ, ಪರರಾಷ್ಟ್ರಗಳ ಹೆಸರು ತೆಗೆದು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.ಕಳೆದ  5 ವರ್ಷದಿಂದ ಸರಿಯಾಗಿ ಮಳೆ ಆಗದೇ ಬೆಳೆ ಇಲ್ಲದೆ ಎಲ್ಲ ರೈತಾಪಿಗಳು ಜನರು ಬಹಳೆ ತೊಂದರೆಯಲ್ಲಿ ಇದ್ದಾರೆ. ಬಹಳಷ್ಟು ಬಡಪಾಯಿಗಳು ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ.

ಸಾಲದ ಬಾಧೆಯಿಂದ ಸುಮಾರು 1600 ಬಡ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಎಲ್ಲ ರಾಜಕಾರಣಿಗಳು ಮನಗಾಣಿಸಬೇಕು ಮತ್ತು ರಾಷ್ಟ್ರಮಟ್ಟದಲ್ಲಾಗಲೀ, ರಾಜ್ಯಮಟ್ಟದಲ್ಲಾಗಲೀ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಯಾರಿಗೂ ಏನೂ ಮಾಡಲು ಬರುವುದಿಲ್ಲ. ಇದನ್ನು ಎಲ್ಲರೂ ಮನಗಾಣಿಸಬೇಕು. ಇದು ಒಂದು ತರಹ ರಾಜಕೀಯ ಭ್ರಮೆ. ಜಗತ್ತಿನ ವಿವಿಧ ದೇಶಗಳ ಪೈಕಿ ಶಾಂತಿ, ಅಹಿಂಸೆ, ಸಮಾನತೆ, ಸಹಿಷ್ಣುತೆ, ಸಹಬಾಳ್ವೆ, ಏಕತೆ, ಮಾನವೀಯತೆ, ಸರ್ವಧರ್ಮಗಳನ್ನು ಗೌರವಿಸುವ ಮನೋಭಾವವನ್ನು ನಮ್ಮ ಭಾರತ ದೇಶದಲ್ಲಿಯೇ ಗಣನೀಯವಾಗಿ ಕಾಣಲು ಸಾಧ್ಯ ಎಂದಿದ್ದಾರೆ.
ಎಲ್ಲ ರಾಜಕಾರಣಿಗಳು  ತಮ್ಮ ಕೆಸರ ಎರಚಾಟ ಕೈಬಿಟ್ಟು ಮೌನವಾಗಿ ಪ್ರಚಾರ ಮಾಡಿ, ಮತದಾರ ಪ್ರಭುವಿನ ಮನಗೆದ್ದು ಆರಿಸಿ ಬಂದು ರಾಜ್ಯದಲ್ಲಿ ಜಿಲ್ಲೆಗಳಲ್ಲಿ ಬಹಳಷ್ಟು ಅಭಿವೃದ್ಧಿ ಕುಂಠಿತಗೊಂಡಿರುವುದು ಗಮನಿಸಿ, ಗುಳೆ ಹೋಗುತ್ತಿರುವ ಬಡಪಾಯಿಗಳನ್ನು ತಡೆದು ಒಂದು ಹೊತ್ತಿನ ಊಟಕ್ಕಾದರೂ ಅವಕಾಶ ಮಾಡಿ, ದನ-ಕರುಗಳಿಗೆ

Leave a Comment