ರಾಘವೇಂದ್ರ ಮಹಿಮೆ

ರಾಘವೇಂದ್ರ ಸ್ವಾಮಿಗಳ ಮಹಿಮೆಯ ಬಗ್ಗೆ ಅನೇಕ ಚಿತ್ರಗಳು ಬಂದಿವೆ. ಇದುವರೆಗೂ ಯಾವ ಚಿತ್ರದಲ್ಲಿ ಬಂದಿರದ ಅನೇಕ ಅಂಶಗಳನ್ನು ಕೇಂದ್ರೀಕರಿಸಿ ಕನ್ನಡ ಮತ್ತು ತೆಲುಗಿನಲ್ಲಿ “ರಾಘವೇಂದ್ರ ಮಹಿಮೆ” ಚಿತ್ರ ಪೂರ್ಣಗೊಂಡಿದೆ.

ನಟಿ ಅಶ್ವಿನಿಗೌಡ,ಧರ್ಮ, ವಿನೋದ್ ಆಳ್ವ ಕನ್ನಡದ ಮುಖಗಳು .ಇನ್ನುಳಿದಂತೆ ಬಹುತೇಕರು  ತಂತ್ರಜ್ಞರು,ಕಲಾವಿದರು ತೆಲುಗಿನವರು. ರವೀಂದ್ರ ಗೋಪಾಲ್ ಚಿತ್ರಕ್ಕೆ ಬಂಡವಾಳ ಹಾಕುವ ಜೊತೆಗೆ ರಾಘವೇಂದ್ರ ಸ್ವಾಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಕೃಷ್ಣಚಂದ್ರ ನಿರ್ದೇಶನ ಮಾಡಿದ್ದು ಮೂರು ವರ್ಷಗಳ ಹಿಂದೆ ಸಿದ್ದಗೊಂಡಿರುವ ಚಿತ್ರ ಈ ತಿಂಗಳ ಕೊನೆಯವಾರ ಇಲ್ಲವೆ ಮುಂದಿನ ತಿಂಗಳು ತೆರೆಯ ಮೇಲೆ ಬರಲಿದೆ. ಅದಕ್ಕಾಗಿ ತಂಡ ಸಿದ್ದತೆ ಮಾಡಿಕೊಂಡಿದೆ.

ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಕಳೆದವಾರ ಯೋಜಿಸಲಾಗಿತ್ತು.ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್, ಹಾಗು ನಟ ವಿಜಯ್ ರಾಘವೇಂದ್ರ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.

ಆ ಬಳಿಕ ಮಾತಿಗಿಳಿದ ನಿರ್ಮಾಪಕ ಕಮ್ ನಟ ರವೀಂದ್ರ ಗೋಪಾಲ್,ಮೂರು ವರ್ಷಗಳ ಹಿಂದೆ ಸಿನಿಮಾ ಆರಂಭವಾಗಿತ್ತು.ಕಾರಣಾಂತರದಿಂದ ವಿಳಂಬವಾಯಿತು. ಈಗ ಎಲ್ಲ ಸಮಸ್ಯೆಯಿಂದ ಹೊರಬಂದು ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದೇವೆ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

ನಟಿ ಅಶ್ವಿನಿಗೌಡ, ಸಿನಿಮಾದಲ್ಲಿ ನಟಿಸಿ ನಾಲ್ಕೂವರೆ ವರ್ಷ ಆಯಿತು. ದೇವರ ಸಿನಿಮಾದಲ್ಲಿ ನಟಿಸುವ ಆಸೆ ಕೊನೆಗೂ ಈಡೇರಿದೆ. ಚಿತ್ರ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದೇನೆ. ಕಿರುತೆರೆಯಲ್ಲಿ ನಟಿಸಲು ಆರಂಭಿಸಿದ ಮೇಲೆ ಸಿನಿಮಾ ಬಿಟ್ಟುಬಿಟ್ಟಿದ್ದಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ನಾನು ಸಿನಿಮಾದಲ್ಲಿಯೂ ನಟಿಸುತ್ತಿದ್ದೇನೆ ಎಂದು ನಿರೂಪಿಸಿಕೊಳ್ಳಲು ಒಳ್ಳೆಯ ಅವಕಾಶ ಈ ಚಿತ್ರ.

ರಾಘವೇಂದ್ರ ಮಹಿಮೆ ಚಿತ್ರದಲ್ಲಿ ನಟಿಸಿದ ಮೇಲೆ ಕಳೆದ ವರ್ಷ ಎರಡು ಬಾರಿ ಉತ್ತಮ ತಾಯಿ ಪಾತ್ರಕ್ಕಾಗಿ ಪ್ರಶಸ್ತಿ ಮತ್ತು ಕಿರುಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಸಿಕ್ಕಿದೆ ಅದಕ್ಕೆಲ್ಲಾ ರಾಯರ ಆಶೀರ್ವಾದವೇ ಕಾರಣ ಎಂದು ಹೇಳಿಕೊಂಡರು.

ಸಂಗೀತ ನಿರ್ದೇಶಕ ಪ್ರಮೋದ್ ಶರ್ಮಾ, ಭಕ್ತಿ ಪ್ರಧಾನ ಚಿತ್ರ. ಏಳು ಹಾಡು ಮತ್ತು ಐದು ಶ್ಲೋಕವಿದೆ.ಕನ್ನಡದ ಗಾಯಕರೇ ಆಡಿದ್ದಾರೆ ಎಂದರು.ಗಾಯಕ ಅಜಯ್ ವಾರಿಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Comment